ಅಂಗಡಿ ಕಳವಿಗೆಂದು ಶೀಟ್ ಮುರಿದ ಕಳ್ಳರು…! ➤ ನಗದು ಸಿಗದಿದ್ದಾಗ ಹತಾಶೆಗೊಂಡು ಅಂಗಡಿಗೆ ಬೆಂಕಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 01.  ಅಂಗಡಿ ಕಳವಿಗೆ ಬಂದ ಕಳ್ಳರು, ಅಂಗಡಿಯಲ್ಲಿ ಹುಡುಕಾಟ ನಡೆಸಿ ಏನೂ ಸಿಗದೇ ಇದ್ದಾಗ ಹತಾಶರಾಗಿ ಅಂಗಡಿಯಲ್ಲಿನ ಅಪಾರ ಪ್ರಮಾಣದ ಸೊತ್ತುಗಳಿಗೆ ಬೆಂಕಿ ಹಚ್ಚಿ ಪರಾರಿಯಾದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ‌.

ಕಲಬುರ್ಗಿಯ ಎ.ಪಿ.ಎಂ.ಸಿ. ಆವರಣದಲ್ಲಿನ ಅಂಗಡಿಯಲ್ಲಿ ಈ ದುರ್ಘಟನೆ ನಡೆದಿದ್ದು,  ಸುಮಾರು 80 ಲಕ್ಷ ರೂಪಾಯಿ ಮೌಲ್ಯದ ಕಿರಾಣಿ ಸಾಮಾನು ಸುಟ್ಟು ಕರಕಲಾಗಿದೆ.  ಲಕ್ಷಾಂತರ ರೂಪಾಯಿ ನಗದು ಸಿಗಬಹುದೆಂದು ಶೆಡ್ ಮುರಿದು ಅಂಗಡಿಗೆ ನುಗ್ಗಿದ ಕಳ್ಳರು ಯಾವುದೇ ಹಣ ಸಿಗದೇ ಶಾಕ್ ಹಣ ಸಿಗದೇ ಇದ್ದಾಗ ನಿರಾಸೆಯಿಂಧ ಅಂಗಡಿಗೇ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ  ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಕಲ್ಬುರ್ಗಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Also Read  ಮಳೆ ನೀರಿಗೆ ಯುವತಿ ಮೃತ್ಯು    ➤ BBMP ಅಧಿಕಾರಿಗಳ ವಿರುದ್ಧ ದೂರು ದಾಖಲು

error: Content is protected !!
Scroll to Top