(ನ್ಯೂಸ್ ಕಡಬ) newskadaba.com ಧಾರವಾಡ, ಜ.01. ಹೊಸ ವರ್ಷದ ಮೊದಲ ಅಪಘಾತ ಧಾರವಾಡದಲ್ಲಿ ನಡೆದಿದ್ದು, ಕುಡಿತದ ಮತ್ತಿನಲ್ಲಿ ಎರ್ರಾಬಿರ್ರಿಯಾಗಿ ಚಲಾಯಿಸುತ್ತಿದ್ದ ಕಾರೊಂದು ಬ್ಯಾರಿಕೇಡ್ ಗಳಿಗೆ ಢಿಕ್ಕಿ ಹೊಡೆದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ವಾಹನ ತಪಾಸಣೆಗೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಬಳಿ ರಸ್ತೆಯ ಬದಿ ಹಾಕಲಾಗಿದ್ದ ಬ್ಯಾರಿಕೇಟ್ ಗೆ ಕಾರು ಢಿಕ್ಕಿ ಹೊಡೆದಿದ್ದು, ಪೊಲೀಸರು ನಿಲ್ಲಿಸುವಂತೆ ಸೂಚಿಸಿದರೂ ಕಾರನ್ನು ನಿಲ್ಲಿಸಿರಲಿಲ್ಲ. ಪೊಲೀಸರು ಬೆನ್ನಟ್ಟಿ ಕಾರನ್ನು ವಶಪಡಿಸಿಕೊಂಡಿದ್ದು, ನಿಷೇಧಾಜ್ಞೆ ಉಲ್ಲಂಘಿಸಿ ಪಾರ್ಟಿ ಮಾಡಿದ ಯುವಕರಿಗೆ ದಂಡ ವಿಧಿಸಿ ಕಳುಹಿಸಲಾಗಿದೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
Also Read ರಾಜ್ಯದಲ್ಲಿ ಸದ್ದಿಲ್ಲದೆ ಹರಡುತ್ತಿದೆ ಹೊಸ ಮಾದರಿಯ ಸೋಂಕು⁉️ ➤ ಸುಳಿವು ಬಿಟ್ಟುಕೊಟ್ಟ ಆರೋಗ್ಯ ಸಚಿವರು..‼️