(ನ್ಯೂಸ್ ಕಡಬ) newskadaba.com ಬೆಂಗಳೂರು , ಡಿ.31. ಈ ಬಾರಿಯ ಪಂಚಾಯತ್ ಚುನಾವಣೆ ಒಂದಲ್ಲ ಒಂದು ರೀತಿಯಿಂದ ವಿಶೇಷವಾಗಿತ್ತು. ಅದರಲ್ಲಿ ತೆಕ್ಕಾರು ಪಂಚಾಯತ್ ವ್ಯಾಪ್ತಿಯ ವಾರ್ಡ್-2 ರಲ್ಲಿ ಈ ಬಾರಿ ಮತದಾರರು 3 ಪಕ್ಷದ ಒಂದೊಂದು ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ.
ಕಾಂಗ್ರೆಸ್ ನ ಭದ್ರ ಕೋಟೆ ಎಂದು ಹೇಳುತ್ತಿದ್ದ ತೆಕ್ಕಾರು-2 ನೇ ವಾರ್ಡ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಐಸಮ್ಮರವರು 7 ಮತಗಳ ಅಂತರದಿಂದ ಜಯಶಾಲಿಯಾದರೆ, ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ಅನ್ವರ್ ನೆಲ್ಲಿಪಳಿಕೆ 10 ಮತಗಳ ಅಂತರದಿಂದ ವಿಜಯಹೊಂದಿ ತೆಕ್ಕಾರು ಪಂಚಾಯತ್ ನಲ್ಲಿ ಖಾತೆ ತೆರೆದರು. ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿ ಯಮುನಾ (ಹಿಂದುಳಿದ ವರ್ಗ) ಇವರು ಅವಿರೋಧ ಆಯ್ಕೆಯಾಗಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡರು. ಈ ಬಾರಿ ಕಾಂಗ್ರೆಸ್, ಬಿಜೆಪಿ, ಎಸ್,ಡಿ,ಪಿ,ಐ, 3 ಪಕ್ಷಗಳ ಒಂದೊಂದು ಅಭ್ಯರ್ಥಿಗಳನ್ನು ತೆಕ್ಕಾರು ವಾರ್ಡ್-2 ರ ಮತದಾರರು ಆರಿಸಿದ್ದು ಯಾವ ರೀತಿ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಮತದಾರರು ಹೇಳುತ್ತಿದ್ದಾರೆ.