(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 31. ತಾಲೂಕಿನ ಉಜಿರೆ ಎಂಬಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತಎಣಿಕೆ ಸಂದರ್ಭದಲ್ಲಿ ಪಾಕಿಸ್ಥಾನ ಪರವಾಗಿ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾಯನಕೆರೆ ಸಮೀಪದ ಪಿಲಿಚಂಡಿಕಲ್ಲು ಕುವೆಟ್ಟು ನಿವಾಸಿಗಳಾದ ಮೊಹಮ್ಮದ್ ಹರ್ಷದ್( 22 ), ದಾವೂದ್ ( 36) ಹಾಗೂ ಇಸಾಕ್ (28) ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೂ ಕೂಡ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ. ಎಸ್ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಸೂಚನೆ ಮೇರೆಗೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಹಾಗೂ ಉಪನಿರೀಕ್ಷಕ ನಂದಕುಮಾರ್ ತಂಡವು ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.
Also Read ಬಂಟ್ವಾಳದಲ್ಲೂ ಕಣದಿಂದ ಹಿಂದೆ ಸರಿದ ಎಸ್ಡಿಪಿಐ..?? ► ನಾಮಪತ್ರ ಹಿಂಪಡೆಯುತ್ತಾರಾ ರಿಯಾಝ್ ಫರಂಗಿಪೇಟೆ...!!