ಡಿವೈಎಫ್‌ಐ ಕಾರ್ಯಕರ್ತನ ಹತ್ಯೆ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ.27: ಡಿವೈಎಫ್‌ಐ ಕಾರ್ಯಕರ್ತ ಕಲ್ಲೂರಾವಿ ಹಳೆ ಕಡಪ್ಪುರದ ಅಬ್ದುಲ್ ರಹಮಾನ್ (30) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ತನಿಖಾ ತಂಡ ಬಂಧಿಸಿದೆ.

ಬಂಧಿತರನ್ನು ಇರ್ಷಾದ್, ಹಸನ್ ಹಾಗೂ ಆಶೀರ್ ಎಂದು ಗುರುತಿಸಲಾಗಿದೆ. ಮೂವರು ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘರ್ಷಣೆ ಸಂದರ್ಭದಲ್ಲಿ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಇರ್ಷಾದ್‌ನನ್ನು ಶುಕ್ರವಾರ ಬೆಳಗ್ಗೆ ಕಾಸರಗೋಡಿಗೆ ಕರೆತರಲಾಯಿತು. ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ಇರ್ಷಾದ್‌ನನ್ನು ಚಿಕಿತ್ಸೆಗಾಗಿ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಇರ್ಷಾದ್‌ನಿಂದ ಮಾಹಿತಿ ಕಲೆ ಹಾಕಿದ್ದ ಪೊಲೀಸರು ಹಸನ್ ಮತ್ತು ಆಶೀರ್ ಅವರನ್ನು ಬಂಧಿಸಿದರು. ಪ್ರಕರಣ ವನ್ನು ಕ್ರೈಂ ಬ್ರಾಂಚ್‌ಗೆ ಒಪ್ಪಿಸಲಾ ಗಿದ್ದು, ಕೃತ್ಯದಲ್ಲಿ ಇನ್ನಷ್ಟು ಮಂದಿ ಭಾಗಿ ಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Also Read  ಸಬಳೂರು: ಶ್ರೀರಾಮ ಗೆಳೆಯರ ಬಳಗದಿಂದ ಶ್ರಮದಾನ ► ಶ್ರೀರಾಮ ಭಜನಾ ಮಂದಿರದ ವಠಾರ ಸ್ವಚ್ಚತೆ

 

 

error: Content is protected !!
Scroll to Top