ಪುತ್ತೂರು : ವಿದ್ಯುತ್ ಆಘಾತಕ್ಕೆ ಕೇಬಲ್ ಆಪರೇಟರ್ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.27: ಬಿಎಸ್ಸೆನ್ನೆಲ್ ಕೇಬಲ್ ಅಳವಡಿಕೆಗಾಗಿ ವಿದ್ಯುತ್ ಕಂಬ ಏರಿದ್ದ ಕೇಬಲ್ ಆಪರೇಟರ್ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಇಂದು (ರವಿವಾರ) ನಡೆದಿದೆ.

ಕೇಬಲ್ ಆಪರೇಟರ್ ಆರ್ಲಪದವು ನಿವಾಸಿ ಪದ್ಮನಾಭ ಪಾಣಾಜೆ(44) ಮೃತಪಟ್ಟವರು.ಪುತ್ತೂರು ನಗರದ ಕೋರ್ಟ್ ರಸ್ತೆಯ ಮೀನು ಮಾರುಕಟ್ಟೆ ಬಳಿಯ ವಿದ್ಯುತ್ ಕಂಬಕ್ಕೆ ಹತ್ತಿದ ವೇಳೆ ಈ ದುರ್ಘಟನೆ ಸಂಭವಿಸಿದೆ.ಪದ್ಮನಾಭ ಅವರು ಬಿಎಸ್ಸೆನ್ನೆಲ್ ಗುತ್ತಿಗೆದಾರ ಸಂಸ್ಥೆ ಶ್ರೀ ಅಸೋಸಿಯೇಟೆಡ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಇಂದು ಬೆಳಗ್ಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದರೆನ್ನಲಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Also Read  ಭೀಮರಾವ್ ವಾಷ್ಠರ್ ನಿರ್ದೇಶನದ 'ಅನುಮಾನ' ಕಿರು ಚಿತ್ರಕ್ಕೆ ರಾಜ್ಯ ಪ್ರಶಸ್ತಿ

 

error: Content is protected !!
Scroll to Top