ಡಿವೈಎಫ್‌ಐ ಕಾರ್ಯಕರ್ತನ ಕೊಲೆ ಖಂಡಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.27: ಡಿವೈಎಫ್‌ಐ ಕಾರ್ಯಕರ್ತ ಅಬ್ದುಲ್ ರಹ್ಮಾನ್‌ ಅವರ ಕೊಲೆ ಖಂಡಿಸಿ ಡಿವೈಎಫ್‌ಐ ಕೊಡ್ಲಮೊಗರು ಗ್ರಾಮ ಸಮಿತಿ ನೇತೃತ್ವದಲ್ಲಿ ಬಾಕ್ರಬೈಲ್‌ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ, ಸಿಪಿಎಂ ಮುಖಂಡ ಮೊಯ್ದಿನ್ ಕುಂಞಿ ತಲಕ್ಕಿ, ಕೇರಳದ ಎಲ್‌ಡಿಎಫ್ ಸರಕಾರದ ಸಾಧನೆಯನ್ನು ದೇಶ- ವಿದೇಶಗಳಲ್ಲಿ ಕೊಂಡಾಡುವ ಈ ಸಂದರ್ಭ ಹತಾಶೆಗೊಂಡಿರುವ ಮುಸ್ಲಿಂ ಲೀಗ್, ಅಮಾಯಕ ಮುಸ್ಲಿಂ ಯುವಕರನ್ನೇ ಟಾರ್ಗೆಟ್ ಮಾಡಿ ಕೊಲೆ ರಾಜಕೀಯ ನಡೆಸಿರುವುದು ಖಂಡನೀಯ ಎಂದರು.ಸಿಪಿಎಂ ಮಂಜೇಶ್ವರ ವಲಯ ಸಮಿತಿ ಸದಸ್ಯ, ವರ್ಕಾಡಿ ಗ್ರಾಪಂ ಸದಸ್ಯೆ ಭಾರತಿ ಎಸ್., ಸಿಪಿಎಂ ಕೊಡ್ಲಮೊಗರು ಲೋಕಲ್ ಸಮಿತಿ ಸದಸ್ಯ ರವೀಂದ್ರ ಎಂ. ಮಾತನಾಡಿದರು. ಡಿವೈಎಫ್‌ಐ ಕೊಡ್ಲಮೊಗರು ಗ್ರಾಮ ಸಮಿತಿಯ ಅಶ್ರಫ್ ಬಾಕ್ರಬೈಲ್, ಸುಜಿತ್ ಕುಮಾರ್, ಯಶೋದಾ, ಅಬ್ದುಲ್ಲ ಕುಂಞಿ,ಆನಂದ ಕಂಪ, ಹಾರಿಸ್, ಇಬ್ರಾಹಿಂ, ಬಶೀರ್, ಇಸ್ಮಾಯಿಲ್, ಸಿಪಿಎಂ ಮುಖಂಡರಾದ ಅಬೂಬಕ್ಕರ್, ಲೋಕೇಶ್ ಶೆಟ್ಟಿ, ಸೀತಾರಾಮ ಕಂಪ, ಮುಹಮ್ಮದ್ ರಫೀಕ್, ಅಹ್ಮದ್ ಕುಂಞಿ, ಸಂಜೀವ ಎಂ. ಮೊದಲಾದವರಿದ್ದರು.

Also Read  ಇಂದು 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

 

 

error: Content is protected !!
Scroll to Top