(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.27: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಕೊಪ್ಪರಿಗೆ ಇಳಿಸುವುದರ ಮೂಲಕ ಮುಕ್ತಾಯಗೊಂಡಿದೆ. ಕಳೆದ ದಿನ ದೇವಾಲಯದ ಹೊರ ಅಂಗಳದಲ್ಲಿ ನೀರು ತುಂಬಿಸಿ ಆ ನೀರಿನಲ್ಲಿ ದೇವರ ಬಂಡಿ ಉತ್ಸವ ನಡೆಯಿತು.ಇದು ನೀರಿನಲ್ಲಿ ಬಂಡಿ ಉತ್ಸವ ಎಂದೇ ಪ್ರಸಿದ್ದಿ. ಬೇರೆ ಯಾವುದೇ ದೇಗುಲದಲ್ಲಿ ನಡೆಯದ ಈ ನೀರು ಬಂಡಿ ಉತ್ಸವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ನಡೆಯುತ್ತಿರುವುದು ವಿಶೇಷ.
ನೀರು ಬಂಡಿ ಉತ್ಸವ ನಡೆಯುವುದರೊಂದಿಗೆ ಈ ಬಾರಿಯ ಚಂಪಾ ಷಷ್ಠಿ ಉತ್ಸವ ಸಂಪೂರ್ಣ ಸಂಪನ್ನಗೊಂಡಿದೆ. ಕಳೆದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿದ್ದ ಭಕ್ತರು ಬಂಡಿ ಉತ್ಸವವನ್ನು ಕಣ್ತುಂಬಿಕೊಂಡು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಭಾಗ್ಯ ಪಡೆದು ಪುನೀತರಾದರು.ಕುಕ್ಕೆ ದೇವಾಲಯದ ಕೇಂದ್ರ ಬಿಂದು ಆಗಿರುವ ಆನೆ ಯಶಸ್ವಿನಿ ನೀರು ಬಂಡಿ ಉತ್ಸವದಲ್ಲಿ ಮಿಂದ್ದು, ನೆರೆದಿದ್ದ ಭಕ್ತರನ್ನು ಪುಳಕಿತಗೊಳಿಸಿತ್ತು.