ದ.ಕ :ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.27: ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ 114 ಗ್ರಾಮ ಪಂಚಾಯತ್ ನ 1,500 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕೆಲವು ಬೂತ್ ಗಳಲ್ಲಿ ಬೆಳಗ್ಗಿನ ಜಾವ ಮತದಾನ ಮಾಡಲು ಉದ್ದದ ಸರತಿ ಸಾಲು ಕಂಡು ಬಂದಿದೆ.

ಸುಳ್ಯ ಶಾಸಕ ಎಸ್.ಅಂಗಾರ ಅವರು ಅಮರಮುಡ್ನೂರು ಗ್ರಾಮ ಪಂಚಾಯತ್ ನ ಮೂರನೇ ವಾರ್ಡ್ ದೊಡ್ಡತೋಟ ಮತಗಟ್ಟೆಯಲ್ಲಿ ಬೆಳಗ್ಗೆ 7 ಗಂಟೆಗೆ ಮತ ಚಲಾಯಿಸಿದರು. ಕುಟುಂಬ ಸಮೇತರಾಗಿ ಆಗಮಿಸಿ ಶಾಸಕ ಅಂಗಾರ ಅವರು ಮತದಾನ ಮಾಡಿದ್ದಾರೆ.4 ತಾಲೂಕುಗಳ 114 ಗ್ರಾಮ ಪಂಚಾಯತ್ ಗಳ 1500 ಸ್ಥಾನಗಳಲ್ಲಿ ಒಟ್ಟು 3,421 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಕ್ಸಲ್ ಬಾದಿತ ಪ್ರದೇಶಗಳಲ್ಲಿ ವಿಶೇಷ ಸುರಕ್ಷತಾ ಪಡೆ ಕಾರ್ಯನಿರ್ವಹಿಸುತ್ತಿದ್ದರೆ,ಇನ್ನುಳಿದಂತೆ ಪೊಲೀಸರ ವಿವಿಧ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

Also Read  ಸುಬ್ರಹ್ಮಣ್ಯ: ಮನೆಗೆ ನುಗ್ಗಿ ನಗ-ನಗದು ಕಳವು

error: Content is protected !!
Scroll to Top