ಕಡಬ ತಾಲೂಕಿನ 21 ಗ್ರಾಮ ಪಂಚಾಯತ್ ಗೆ ಇಂದು ಚುನಾವಣೆ ➤ 285 ಸ್ಥಾನಗಳಲ್ಲಿ 642 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

(ನ್ಯೂಸ್ ಕಡಬ) newskadaba.com ಕಡಬ, ಡಿ.27. ಕಡಬ ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆಯು ಬಿರುಸಿನಿಂದ ಸಾಗುತ್ತಿದೆ. 21 ಗ್ರಾಮ ಪಂಚಾಯತ್ ಗಳ 91 ವಾರ್ಡ್ ಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 285 ಸ್ಥಾನಗಳಿಗೆ 642 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ‌. ಕಣದಲ್ಲಿರುವ ಅಭ್ಯರ್ಥಿಗಳು ಮತದಾರರನ್ನು ಆಕರ್ಷಿಸುತ್ತಿರುವುದು ಕಂಡು ಬರುತ್ತಿದೆ. ಗ್ರಾಮೀಣ ಭಾಗದ ಮತದಾರರನ್ನು ಕರೆತರಲು ಅಭ್ಯರ್ಥಿಗಳು ವಾಹನದ ವ್ಯವಸ್ಥೆ ಕಲ್ಪಿಸಿದ್ದಾರೆ.

ಕಡಬ ತಾಲೂಕಿನ ಗೋಳಿತೊಟ್ಟು, ನೆಲ್ಯಾಡಿ, ಕೌಕ್ರಾಡಿ, ನೂಜಿಬಾಳ್ತಿಲ, ಶಿರಾಡಿ, ಕೊಂಬಾರು, ಬಿಳಿನೆಲೆ, ಐತ್ತೂರು, ಕೊಣಾಜೆ, ಮರ್ದಾಳ, ಕುಟ್ರುಪ್ಪಾಡಿ, ಪೆರಾಬೆ, ರಾಮಕುಂಜ, ಕೊಯಿಲ, ಆಲಂಕಾರು, ಸವಣೂರು, ಬೆಳಂದೂರು, ಕಾಣಿಯೂರು, ಎಡಮಂಗಲ, ಬಳ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗಳ ಅಧಿಕಾರದ ಚುಕ್ಕಾಣಿ ಹಿಡಿಯಲು ವಿವಿಧ ಪಕ್ಷಗಳ ಬೆಂಬಲಿತರು ಕಸರತ್ತು ನಡೆಸುತ್ತಿದ್ದಾರೆ.

Also Read  ಪುತ್ತೂರು: ವಿವಾಹಿತ ವ್ಯಕ್ತಿ ಆತ್ಮಹತ್ಯೆ

error: Content is protected !!
Scroll to Top