ಕಲ್ಲಡ್ಕ :ಕೈ ಕೊಟ್ಟ ಲಿಫ್ಟ್ ➤ 2 ಗಂಟೆ ಬಂಧಿಯಾದ ಬಾಲಕಿಯರು

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಡಿ.26: ವಸತಿ ಸಮುಚ್ಚಯ ವೊಂದರಿಂದ ದಿನೋಪಯೋಗಿ ವಸ್ತು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಲೋಪದಿಂದ ಲಿಫ್ಟ್ ನಲ್ಲೇ ಸುಮಾರು 2 ಗಂಟೆ ಬಾಕಿಯಾದ ಘಟನೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದಿದೆ.ಸಂಜೆ ಸುಮಾರು 5.30ರ ವೇಳೆ ಕಲ್ಲಡ್ಕದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ನಾಲ್ವರು ಬಾಲಕಿಯರು ಲಿಫ್ಟ್ ನಲ್ಲಿರುವಾಗಲೇ ವಿದ್ಯುತ್ ಸಂಪರ್ಕ ಹೋಗಿದೆ.

ಬಳಿಕ ವಿದ್ಯುತ್ ಬಂದರೂ ಲಿಫ್ಟ್ ಚಾಲೂ ಆಗಲಿಲ್ಲ. ಕೆಲಹೊತ್ತಿನ ಬಳಿಕವೂ ಹೀಗಾದಾಗ ಹೆದರಿದ ಬಾಲಕಿಯರು ಬೊಬ್ಬೆ ಹಾಕಿದರು. ಈ ವೇಳೆ ಸ್ಥಳೀಯರು ಒಟ್ಟುಗೂಡಿ ಲಿಫ್ಟ್ ಬಾಗಿಲು ತೆರೆಯಲು ಪ್ರಯತ್ನಿಸಿದರೂ ಆಗಲಿಲ್ಲ.ಇದೇ ಹೊತ್ತಿಗೆ ಲಿಫ್ಟ್ ಕಂಪನಿಯವರನ್ನು ಬರಹೇಳಲಾಯಿತು. ಅಗ್ನಿಶಾಮಕ ದಳದವರಿಗೂ ಕರೆ ಹೋಯಿತು.ಈ ಕಾರ್ಯಾಚರಣೆ ನಡೆಯುತ್ತಿರುವ ಹೊತ್ತಿನಲ್ಲಿ ಉಸಿರುಗಟ್ಟದಂತೆ ಸ್ಥಳೀಯರು ಲಿಫ್ಟ್ ಮೇಲ್ಭಾಗವನ್ನು ಅರ್ಧ ತೆರೆದು ಗಾಳಿ ಬೀಸುವ ಉದ್ದೇಶದಿಂದ ಟೇಬಲ್ ಫ್ಯಾನ್ ಹಿಡಿದರು.ಕಟ್ಟಡದ ಲಿಫ್ಟ್ ನ ಕೆಲಸ ಮಾಡಿದ ಕಂಪೆನಿ ಯವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಲಿಫ್ಟ್ ನ ತಾಂತ್ರಿಕ ದೋಷ ಸರಿಪಡಿಸಿ ಸುಮಾರು 7.15ಕ್ಕೆ ಮಕ್ಕಳು ಯಾವುದೇ ಸಮಸ್ಯೆಯಿಲ್ಲದೆ ಹೊರಗೆ ಬರುವಂತೆ ಮಾಡಿದರು.ಸದ್ಯ ಸಾವಿನ ದವಡೆಯಿಂದ ಬಾಲಕಿಯರು ಪಾರಾಗಿದ್ಧಾರೆ.

Also Read  ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

 

error: Content is protected !!
Scroll to Top