(ನ್ಯೂಸ್ ಕಡಬ) newskadaba.com ಉಡುಪಿ, ಡಿ.26: ಬೈಂದೂರು ತಾಲೂಕಿನ ನಾವುಂದದಲ್ಲಿ ಗೋ ಕಳ್ಳನೊಬ್ಬನನ್ನು ಬಂಧಿಸಿ, 13 ಗೋವುಗಳನ್ನು ರಕ್ಷಿಸಲಾಗಿದೆ. ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ ಮಿಂಚಿನ ಕಾರ್ಯಾಚರಣೆ ಮೂಲಕ 13 ಗೋವು ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ.
ನಾವುಂದದಿಂದ ಜಲೀಲ್ ಎಂಬ ಗೋ ಕಳ್ಳನ ಗ್ಯಾಂಗ್, ಇನ್ಸು ಲೇಟರ್ ನಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಗೋ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ಇತ್ತು.. ಒಂದು ತಿಂಗಳ ನಿರಂತರ ಈ ಬಗ್ಗೆ ಕಾರ್ಯಾಚರಣೆ ಮಾಡಿದ ಹಿಂದೂ ಸಂಘಟನೆಗಳು ಪೊಲೀಸರಿಗೆ ದೊರಕಿತ್ತು. ಜಲೀಲ್ ಎಂಬ ಗೋ ಕಳ್ಳನ ತಂಡದ ಬಗ್ಗೆ ನಿಖರವಾದ ಮಾಹಿತಿ ಪಡೆದು ಸಂಘಟನೆ ಕಾರ್ಯಕರ್ತರು ಸರ್ಕಲ್ ಇನ್ಸ್ ಪೆಕ್ಟರ್ ಕಾಯ್ಕಿಣಿಯವರಿಗೆ ಮಾಹಿತಿ ನೀಡಿ ಬೆನ್ನಟ್ಟಿ ಬಂದರು. ನಂತರ ನಾವುಂದದಿಂದ ಶಿರೂರು ಚೆಕ್ ಪೋಸ್ಟ್ ತನಕ ಬೆನ್ನಟ್ಟಿ, ಪರಿಸ್ಥಿತಿ ಬೈಂದೂರು ಕ್ಷೇತ್ರದ ವ್ಯಾಪ್ತಿ ಮೀರಿದ ಮೇಲೆ ಸರ್ಕಲ್ ಇನ್ಸ್ ಪೆಕ್ಟರ್ ಅಖಾಡಕ್ಕೆ ಇಳಿದು, ಭಟ್ಕಳ ತನಕ ತನ್ನ ಸಿಬ್ಬಂದಿ ಜೊತೆಗೆ ತೆರಳಿ ಆರೋಪಿಗಳನ್ನು ಬೆನ್ನಟ್ಟಿದರು.
ನಂತರ ಆರೋಪಿಗಳು ಅಲ್ಲಿಂದ ಗಾಡಿ ಬಿಟ್ಟು ಎಸ್ಕೇಪ್ ಆದರೂ ಬಿಟ್ಟು ಹೋದ ವಾಹನವನ್ನು ಮುಟ್ಟುಗೊಲು ಹಾಕಿ,13 ಗೋವುಗಳ ರಕ್ಷಣೆ ಜೊತೆಗೆ ಒಬ್ಬ ಆರೋಪಿಯನ್ನು ಬಂಧಿಸಲಾಯಿತು.ಸದ್ಯ ಉಳಿದ ಆರೋಪಿಯ ಪತ್ತೆಗಾಗಿ ಪೊಲೀಸರ ತಂಡ ಬಲೆ ಬೀಸಿದ್ದಾರೆ.