ವಿಟ್ಲ :ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ದರೋಡೆ.!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.25: ಪತಿ ಮಸೀದಿಗೆ ತೆರಳಿದ, ಬಳಿಕ ಮನೆಗೆ ಆಗಮಿಸಿದ ಕಳ್ಳರ ತಂಡವೊಂದು ಹಾಡು ಹಗಲೇ ಒಂಟಿ ಮಹಿಳೆಯನ್ನು ಕಟ್ಟಿ ಹಾಕಿ ,ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದ ಘಟನೆ ವಿಟ್ಲ ಸಮೀಪದ ಕಾಂತಡ್ಕದಲ್ಲಿ ಡಿ.25 ರ ಇಂದು ನಡೆದಿದೆ.ಕಾಂತಡ್ಕ ಜುಮಾ ಮಸೀದಿ ಮುಂಭಾಗದಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಟೋ ಚಾಲಕ ರಫೀಕ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ.

ರಫೀಕ್ ಅವರು ಶುಕ್ರವಾರ ಮಧ್ಯಾಹ್ನ ಮಸೀದಿಗೆ ತೆರಳಿದ್ದರು. ಅವರ ಜತೆ ಅವರ 10 ವರ್ಷದ ಪುತ್ರ ಕೂಡಾ ತೆರಳಿದ್ದರು. ಪತ್ನಿ ಜೈನಾಬ ಅವರು ಒಬ್ಬರೇ ಇದ್ದರು. ಈ ಬಗ್ಗೆ ಮಾಹಿತಿ ಪಡೆದ ವ್ಯಕ್ತಿ ಮಹಿಳೆಯನ್ನು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆಗೈದಿದ್ದಾರೆ.ರಫೀಕ್ ಅವರ ಮನೆಯ ಸುತ್ತಲೂ ಮನೆಗಳಿದ್ದರೂ ಘಟನೆ ಯಾರ ಗಮನಕ್ಕೂ ಬಂದಿಲ್ಲ. ರಫೀಕ್ ಅವರು ಮಸೀದಿಯಿಂದ ವಾಪಸಾದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

Also Read  ಎಸ್ಡಿಪಿಐ ಆತೂರು ವಲಯ ವತಿಯಿಂದ ಬಿಜೆಪಿ ಸರಕಾರದ ರೈತ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ದ ಪ್ರತಿಭಟನೆ

 

error: Content is protected !!
Scroll to Top