ಪುತ್ತೂರು: ಅಲ್ಯೂಮಿನಿಯಮ್ ಕೊಕ್ಕೆಯಲ್ಲಿ ಅಡಿಕೆ ತೆಗೆಯುವಾಗ ವಿದ್ಯುತ್ ಪ್ರವಹಿಸಿ ಉದ್ಯಮಿ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.25:ಮನೆಯ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ವೇಳೆ ಕೊಕ್ಕೆಯ ಮೂಲಕ ವಿದ್ಯುತ್ ಪ್ರವಾಹಗೊಂಡು ಉದ್ಯಮಿಯೊಬ್ಬರು ಮೃತಪಟ್ಟ ಘಟನೆ ಡಿ.25  ರ ಇಂದು ಪುತ್ತೂರು ಅಜ್ಜಿಕಲ್ಲು ಎಂಬಲ್ಲಿ ನಡೆದ ಬಗ್ಗೆ ನಡೆದಿದೆ.

ಅಜ್ಜಿಕಲ್ಲು ನಿವಾಸಿ ಬಾಬು‌ಪೂಜಾರಿ ಅವರ ಪುತ್ರ ಮಂಗಳೂರು ಬಿಜೈ ಯಲ್ಲಿ ಜೆ.ಡಿ.ಎ. ಇನ್ ಫೋಟೆಕ್ ಸಂಸ್ಥೆಯ ಮಾಲಕ ರವೀಂದ್ರ ಪೂಜಾರಿ(34ವ) ರವರು ಮೃತಪಟ್ಟವರು.ಅವರು ಕ್ರಿಸ್ ಮಸ್ ರಜಾ ಅವಧಿಯಲ್ಲಿ ಅಜ್ಜಿಕಲ್ಲು ಮನೆಗೆ ಬಂದವರು ಮನೆಯ ತೋಟದಲ್ಲಿ ಅಡಿಕೆಮರ ಏರಿ ಕೊಕ್ಕೆಯ ಮೂಲಕ ಅಡಿಕೆ ಗೊಣೆ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟಿದ್ದಾರೆ.ಇನ್ನು ಶಾಸಕ ಸಂಜೀವ ಮಠಂದೂರು ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ದೇಹದ ಅಂತಿಮ ದರ್ಶನ ಪಡೆದರು.

Also Read  ಮಂಗಳೂರು: ಶ್ರೀನಿವಾಸ್ ಕ್ಯಾಂಪಸ್ ನಲ್ಲಿ “ರೋಬೊಟಿಕ್ಸ್” ತಂತ್ರಜ್ಞಾನದ ಕುರಿತು 2 ದಿನಗಳ ಕಾರ್ಯಾಗಾರ

 

error: Content is protected !!
Scroll to Top