ಮಂಗಳೂರು: ಸಂಗೀತ ಸಾಧಕ ಮುರಳೀಧರ ಕಾಮತ್ ಗೆ ‘ ರಂಗ ಚಾವಡಿ’ ಪ್ರಶಸ್ತಿ ಗೌರವ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ತುಳು ಸಾಹಿತ್ಯ ಅಕಾಡೆಮಿ ಹಾಗೂ ರಂಗ ಚಾವಡಿ ಮಂಗಳೂರು ಆಶ್ರಯದಲ್ಲಿ ನಗರದ ಉರ್ವಸ್ಟೋರ್ ನಲ್ಲಿರುವ ತುಳುಭವನದ ಸಿರಿ ಚಾವಡಿ ವೇದಿಕೆಯಲ್ಲಿ “ರಂಗ ಚಾವಡಿ ಪ್ರಶಸ್ತಿ” ಪ್ರದಾನ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಿದರು. ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಜಿ.ಕತ್ತಲ್ ಸಾರ್ ವಹಿಸಿದ್ದರು. ಈ ವೇಳೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಮುರಳೀಧರ ಕಾಮತ್ ಅವರಿಗೆ ‘ರಂಗಚಾವಡಿ ಗೌರವ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ರಂಗಕರ್ಮಿ, ಸಿನಿಮಾ ನಿರ್ಮಾಪಕ ಸಂಜೀವ ದಂಡಕೇರಿ, ದಿವ್ಯರೂಪ ಕನ್ ಸ್ಟ್ರಕ್ಷ ನ್ಸ್ ನ ಯಾದವ ಕೋಟ್ಯಾನ್ ಪೆರ್ಮುದೆ, ಉದ್ಯಮಿ ರಮಾನಾಥ ಶೆಟ್ಟಿ ಬೈಕಂಪಾಡಿ, ಮಾತಾ ಡೆವಲಪರ್ಸ್ ನ ಮುಖ್ಯಸ್ಥ ಎನ್ .ಸಂತೋಷ್ ಕುಮಾರ್ ಶೆಟ್ಟಿ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ಸುಧಾಕರ್ ಪೂಂಜ ಅಧ್ಯಕ್ಷರು ಬಂಟರ ಸಂಘ ಸುರತ್ಕಲ್, ಮತ್ತಿತರರು ಉಪಸ್ಥಿತರಿದ್ದರು.

Also Read  ರಾಮಕುಂಜ ಮತ್ತು ಕೊಯಿಲ ಗ್ರಾ.ಪಂ. ವ್ಯಾಪ್ತಿ         ➤ ಬಿಜೆಪಿ ಮುಖಂಡರಿಂದ ಗೋಳಿತ್ತಡಿ- ಏಣಿತ್ತಡ್ಕ ರಸ್ತೆಯ ತೇಪೆ ಕಾರ್ಯ ಪರಿಶೀಲನೆ       

 

 

error: Content is protected !!
Scroll to Top