ಕುಕ್ಕೆಗೂ ತಟ್ಟಿದ ಕೋರೊನಾ ಬಿಸಿ ➤ ದೇವಾಲಯಗಳ ಆದಾಯದಲ್ಲಿ ಭಾರೀ ಇಳಿಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.25: ಕೋವಿಡ್-19 ಈ ವರ್ಷ ಅಧಿಕ ಆದಾಯ ತರುವ ದೇವಸ್ಥಾನಗಳನ್ನು ಕೂಡ ಬಿಟ್ಟಿಲ್ಲ. ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಂಪದ್ಭರಿತ ದೇವಸ್ಥಾನಗಳಾದ ಕುಕ್ಕೆ ಸುಬ್ರಹ್ಮಣ್ಯದಂತಹ ದೇವಸ್ಥಾನಗಳ ಆದಾಯ ಕೂಡ ಕುಸಿದಿದೆ.

ಕರ್ನಾಟಕದಲ್ಲಿರುವ ಪ್ರಮುಖ 12 ದೇವಾಲಯಗಳು ಕಳೆದ ವರ್ಷ ಒಟ್ಟಾರೆ 317 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದ್ದರೆ ಈ ವರ್ಷ ಗಳಿಸಿದ ಆದಾಯ ಕೇವಲ 18.6 ಕೋಟಿ ಮಾತ್ರ. ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಕುಕ್ಕೆ ಸುಬ್ರಹ್ಮಣ್ಯ ಪ್ರತಿವರ್ಷ ಸರಾಸರಿ 90 ಕೋಟಿ ರೂಪಾಯಿ ಆದಾಯ ಗಳಿಸುತ್ತದೆ, ಆದರೆ ಈ ವರ್ಷ ಗಳಿಸಿದ್ದು ಕೇವಲ 4.2 ಕೋಟಿ ರೂಪಾಯಿ.ಈ ಬಗ್ಗೆ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ವರ್ಷ ದೇವಾಲಯಗಳ ಆದಾಯ ಕಡಿಮೆಯಾಗಿರುವುದು ಹೌದು. ಆದರೆ ಮುಜರಾಯಿ ಇಲಾಖೆಯ ದೇವಾಲಯಗಳ ಸಿಬ್ಬಂದಿಯ ವೇತನಕ್ಕೆ ಧಕ್ಕೆಯಾಗಿಲ್ಲ. ನಮ್ಮ ದೇವಸ್ಥಾನಗಳಲ್ಲಿ ಸಿಬ್ಬಂದಿಗೆ ವೇತನ ನೀಡಲು ಹಣ ಸಾಕಷ್ಟಿದ್ದು, ನಿಗದಿತ ಸಮಯಕ್ಕೆ ವೇತನ ನೀಡಲಾಗಿದೆ. ಬ್ಯಾಂಕುಗಳಿಟ್ಟ ಹಣದಿಂದ ಬಂದ ಬಡ್ಡಿಯಿಂದ ವೇತನ ನೀಡಲಾಗಿದೆ ಎಂದರು.

Also Read  ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ➤ ಅನುಪಯುಕ್ತ ಪೀಠೋಪಕರಣಗಳ ವಿಲೇವಾರಿ

 

error: Content is protected !!
Scroll to Top