ಕಡಬದಲ್ಲಿ ಸರಳವಾಗಿ ಕ್ರಿಸ್ ಮಸ್ ಸಂಭ್ರಮಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಡಿ.25: ವಿಶ್ವದೆಲ್ಲೆಡೆ ಇಂದು ಕ್ರಿಸ್ ಮಸ್ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಜಗತ್ತಿಗೆ ಶಾಂತಿಮಂತ್ರ ಬೋಧಿಸಿದ ಯೇಸು ಕ್ರಿಸ್ತನ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.ಕಡಬ, ಕೋಡಿಂಬಾಳ ಕುಟ್ರುಪಾಡಿ ಕುಂತೂರು ನೆಲ್ಯಾಡಿ ಸೇರಿದಂತೆ ಬಹುತೇಕ ಎಲ್ಲ ಚರ್ಚ್‍ಗಳನ್ನು ವಿದ್ಯುತ್ ದೀಪ ಸಕ್ಷತ್ರಗಳಿಂದ ಅಲಂಕಾರಿಸಲಾಗಿದೆ. ಚರ್ಚ್ ಆವರಣದಲ್ಲಿ ಮತ್ತು ಕೈಸ್ತರ ಮನೆ ಆವರಣದಲ್ಲಿ ಆಕರ್ಷಕ ಗೋದಲಿಗಳನ್ನು ನಿರ್ಮಿಸಲಾಗಿತ್ತು.

ಬಾಲಯೇಸು ಮೂರ್ತಿಯನ್ನು ಇಟ್ಟು, ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವ ಮೂಲಕ ಯೇಸು ಸ್ವಾಮಿಯ ಜನನವನ್ನು ಸ್ವಾಗತಿಸಲಾಯಿತು.ವಿವಿಧ ಚರ್ಚ್ ಗಳಲ್ಲಿ ಮಧ್ಯರಾತ್ರಿಯಿಂದಲೇ ಶ್ರದ್ದಾ, ಭಕ್ತಿಯಿಂದ ಕ್ರಿಸ್ ಮಸ್ ಆಚರಿಸಲಾಗುತ್ತಿದ್ದು, ಕೇಕ್ ಕತ್ತರಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಯೇಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ.ಕ್ರಿಸ್ ಮಸ್ ಹಬ್ಬದ ನಿಮಿತ್ತ ಚರ್ಚ್‌ನ ಹೊರ ಭಾಗದಲ್ಲಿ ದೀಪಾಲಂಕರ ಮಾಡಲಾಗಿದ್ದು, ಒಳಭಾಗದಲ್ಲಿನ ಪ್ರಾರ್ಥನಾ ಸಭಾಂಗಣದಲ್ಲಿ ಏಸು ಹುಟ್ಟಿದ ಬೇತಲ್‌ಹೇಮ್‌ನ ಗೋದಾಲಿ ಸಿದ್ಧಪಡಿಸಲಾಗಿದೆ.ಪ್ರಾರ್ಥನ ಸ್ಥಳಗಳಲ್ಲಿ ಡಿಸೆಂಬರ್ ಟ್ರೀಗಳ ಮಾದರಿಯನ್ನು ಇರಿಸಲಾಗಿದೆ.

Also Read  ಮಂಗಳೂರು: ಪಿ.ಎ ಎಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ಡಾ.ಪಿ.ಎ ಇಬ್ರಾಹಿಂ ಹಾಜಿ ವಿಧಿವಶ

 

 

error: Content is protected !!
Scroll to Top