ಮಂಗಳೂರು: ಬ್ರಿಟನ್ ನಿಂದ ಮತ್ತೆ 8 ಮಂದಿ ದ.ಕ. ಜಿಲ್ಲೆಗೆ ಆಗಮನ ➤ಇನ್ನುಂದೆ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಕಡ್ಡಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಇಂಗ್ಲೆಂಡ್‌ನಲ್ಲಿ ರೂಪಾಂತರಿತ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಚ್ಚರವಹಿಸಲಾಗಿದ್ದು, ಬ್ರಿಟನ್ ನಿಂದ ಮತ್ತೆ ಎಂಟು ಮಂದಿ ದ.ಕ. ಜಿಲ್ಲೆಗೆ ಆಗಮಿಸಿದ್ದಾರೆ. ಈ ಎಲ್ಲರನ್ನೂ ಇದೀಗ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ‌ ನೀಡಿದೆ.

ಈ ಎಂಟು ಮಂದಿಯ ವರದಿ ಮುಂದಿನ ಶುಕ್ರವಾರ ಬರಲಿದೆ. ಬ್ರಿಟನ್‌ನಿಂದ ಜಿಲ್ಲೆಗೆ ಆಗಮಿಸಿದ ಎಲ್ಲರ ಪರೀಕ್ಷೆ ನಡೆಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ‌ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಈ ಮೊದಲು ಬ್ರಿಟನ್‌ನಿಂದ 66 ಮಂದಿ ದ.ಕ. ಜಿಲ್ಲೆಗೆ ಬಂದಿದ್ದರು. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಬೇಕೆದ್ದರೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕಿದೆ. ಇದರ ಜತೆಗೆ ಇಂಗ್ಲೆಂಡ್‌ನಲ್ಲಿ ಕೋವಿಡ್-19 ಸೋಂಕಿನ ಹೊಸ ತಳಿಯ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನಿಂದ ಭಾರತಕ್ಕೆ ಬರುವ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ,ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.

Also Read  ಗದಗ : ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಟಿವಿ ತರಲು ತಾಳಿಯನ್ನೇ ಅಡವಿಟ್ಟ ತಾಯಿ

 

error: Content is protected !!
Scroll to Top