ಉಪ್ಪಿನಂಗಡಿ: ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.24: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ, ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಡಾಂಬರು ಸಾಗಾಟದ ಟ್ಯಾಂಕರ್ ಪಲ್ಟಿಯಾಗಿ ಸುಮಾರು 100 ಅಡಿ ಆಳಕ್ಕೆ ನದಿಗೆ ಉರುಳಿ ಬಿದ್ದಿದೆ. ಟ್ಯಾಂಕರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅರ್ಧದಷ್ಟು ಡಾಂಬರು ಸೋರಿಕೆಯಾಗಿ ನದಿನೀರಿನಲ್ಲಿ ಸೇರಿಕೊಂಡಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಬೆದ್ರೋಡಿಯ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೆ ನದಿ ಪಾತ್ರದತ್ತ ಸಂಚರಿಸಿ ನೂರು ಅಡಿ ದೂರದಲ್ಲಿನ ನೇತ್ರಾವತಿ ನದಿಯಲ್ಲಿ ಮಗುಚಿ ಬಿದ್ದಿದ್ದು, ನುಜ್ಜುಗುಜ್ಜಾಗಿದೆ. ಟ್ಯಾಂಕರ್‌ ಚಾಲಕರಾದ ಸುಳ್ಯದ ಅಬ್ದುಲ್ ಖಾದರ್ ಹಾಗೂ ಮಲಂಗಾವ್ ನಿವಾಸಿ ಮಲ್ಲಿಕಾರ್ಜುನ್ ಎಂಬವರು ಟ್ಯಾಂಕರ್ ಪಲ್ಟಿ ಆಗುತ್ತಿದ್ದಂತೆಯೇ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ➤ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆ

 

error: Content is protected !!
Scroll to Top