ಅಪ್ರಾಪ್ತೆಯನ್ನು ವಿವಾಹವಾಗಿ ಬಳಿಕ ಕೊಂದು ಹೂತಿಟ್ಟ ಗಂಡ ➤ 15 ದಿನಗಳ ನಂತರ ಪ್ರಕರಣ ಬೆಳಕಿಗೆ

(ನ್ಯೂಸ್ ಕಡಬ) newskadaba.com ಮಧುಗಿರಿ , ಡಿ.24: ಕುಟುಂಬಸ್ಥರ ವಿರೋಧದ ನಡುವೆಯೂ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕೊಲೆ ಮಾಡಿ ಮನೆಯಲ್ಲೇ ಹೂತುಹಾಕಿರುವ ಘಟನೆ ನಡೆದಿದ್ದು, ಆರೋಪಿ ಗಂಡ ತಲೆಮರೆಸಿಕೊಂಡಿದ್ದಾನೆ. ಮಧುಗಿರಿ ತಾಲೂಕಿನ ಹೊಸಇಟಕಲೋಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ತಪಾಸಣೆಯ ವೇಳೆ ಮನೆಯಲ್ಲೇ 16 ವರ್ಷದ ಬಾಲಕಿ ಶವ ಪತ್ತೆಯಾಗಿದ್ದು, ಮೃತ ಬಾಲಕಿಯ ಅಕ್ಕ ಶ್ವೇತಾಳಿಂದ ಪ್ರಕರಣ ಬೆಳಕಿಗೆ ಬಂದಿದೆ.

 

ಅಪ್ರಾಪ್ತ ವಯಸ್ಸಿನ ಬಾಲಕಿ ವಿವಾಹಿತೆಯೂ ಆಗಿದ್ದಳು. 9 ತಿಂಗಳ ಹಿಂದಷ್ಟೇ ಮದುವೆಯಾಗಿದ್ದಳು. ಬಾಲಕಿ ಮನೆಯವರ ವಿರೋಧದ ಮಧ್ಯೆಯೂ ಆಕೆಯನ್ನ ಅದೇ ಗ್ರಾಮದ ನರಸಿಂಹಮೂರ್ತಿ ಬಲವಂತವಾಗಿ ಮದುವೆಯಾಗಿದ್ದ. ಆಕೆಯ ಕುಟುಂಬದವರು ಮದುವೆಗೆ ವಿರೋಧಿಸಿದರೂ ಇಲಾಖೆಗೆ ಯಾರಿಂದಲೂ ದೂರು ದಾಖಲಾಗಿರಲಿಲ್ಲ.

Also Read  ಇಂತಹ ಅಕ್ಷರಿಂದ ಹೆಸರು ಶುರು ಆಗುವ ಜನರನ್ನು ವಿವಾಹ ಜೇವನ ಅದ್ಬುತವಾಗಿರುತ್ತದೆ

 

ಕಳೆದ 15 ದಿನಗಳಿಂದ ನನ್ನ ಮಗಳು ಕಾಣಿಸುತ್ತಿಲ್ಲವೆಂದು ಬಾಲಕಿಯ ತಂದೆ ಮಿಡಿಗೇಶಿ ಠಾಣೆಗೆ ದೂರು ನೀಡಿದ್ದರು. ಆದರೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಮೃತ ಬಾಲಕಿಯ ಅಕ್ಕ ಶ್ವೇತಾ ಅವರು ನರಸಿಂಹಮೂರ್ತಿಯ ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಮನೆಯ ಮಧ್ಯಭಾಗ ಕಂದಕ ಸೃಷ್ಟಿಸಿ ಕಡಪಾ ಕಲ್ಲಿನಿಂದ ಮುಚ್ಚಿದಂತೆ ಕಂಡು ಬಂದಿದೆ. ಅನುಮಾನಗೊಂಡ ಶ್ವೇತಾ ತನ್ನ ತಂದೆಗೆ ತಿಳಿಸಿ ಮತ್ತೊಮ್ಮೆ ದೂರು ನೀಡಿದ್ದರು. ಈ ದೂರು ಆಧರಿಸಿ ಬುಧವಾರ ಉಪವಿಭಾಗಾಧಿಕಾರಿ, ಸಿಡಿಪಿಓ, ಸಿಪಿಐ ನೇತೃತ್ವದಲ್ಲಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಅಪ್ರಾಪ್ತ ಬಾಲಕಿಯನ್ನು ಕೊಲೆ ಮಾಡಿ ಮಧ್ಯಭಾಗದಲ್ಲಿ ಗುಂಡಿಯಲ್ಲಿ ಹೂತುಹಾಕಲಾಗಿರುವ ಸಂಗತಿ ಬೆಳಕಿಗೆ ಬಂದಿದೆ.

error: Content is protected !!