ಗ್ರಾಮ ಪಂಚಾಯಿತಿ ಚುನಾವಣೆ ➤ ಐವರ್ನಾಡು ಮತ್ತು ಅರಂಬೂರಿನಲ್ಲಿ ಬಿಜೆ.ಪಿ.ಜಿಲ್ಲಾಧ್ಯಕ್ಷರಿಂದ ಮತ ಯಾಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24: ಐವರ್ನಾಡು ಮತ್ತು ಆಲೆಟ್ಟಿ ಗ್ರಾಮದ ಅರಂಬೂರು ವಾರ್ಡುಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಕಾರ್ಯಕರ್ತರ ಸಭೆ ನಡೆಸಿ ಮತಯಾಚನೆ ನಡೆಸಿದರು.

ಸಭೆಯಲ್ಲಿ ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬೂಡಿಯಾರು ರಾಧಾಕೃಷ್ಣ ರೈ, ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿ , ಪಕ್ಷದ ಸಿದ್ಧಾಂತಕ್ಕೆ ಬಧ್ಧರಾದ ಕಾರ್ಯಕರ್ತರಿಗೆ ಧೈರ್ಯ ತುಂಬಿದರು. ಪಕ್ಷದ ಅಭ್ಯರ್ಥಿಗಳಾದ ರಕ್ಷಿತ್ ಸಾರಕೂಟೇಲು, ರೇವತಿ ಬೋಳುಗುಡ್ಡೆ, ನವೀನ ಕುಮಾರ್ ಸಾರಕೆರೆ, ರಾಜೀವಿ ಲಾವಂತ್ತಡ್ಕ, ಕಿಶನ್ ಜಬಳೆ ಉಪಸ್ಥಿತರಿದ್ದರು.

Also Read  ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದ ಸಹಭಾಗಿತ್ವದಲ್ಲಿ►ಜಲಕೃಷಿಯಲ್ಲಿ ಉದ್ಯಮ ಶೀಲತೆಯ ಕಲಿಕೆಯೊಂದಿಗೆ ಕ್ಷೇತ್ರ ಭೇಟಿಯ ಅಧ್ಯಯನ

ಆಲೆಟ್ಟಿ ಗ್ರಾಮದ ಅರಂಬೂರು ವಾರ್ಡಿಗೆ ಭೇಟಿ ನೀಡಿ ಸಭೆ ನಡೆಸಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ಈ ಬಾರಿಯ ಚುನಾವಣೆಯಲ್ಲಿ ಆಲೆಟ್ಟಿ ಗ್ರಾಮ ಪಂಚಾಯತ್ ಪೂರ್ಣ ಪ್ರಮಾಣದಲ್ಲಿ ಅಂದರೆ ಎಲ್ಲಾ 21 ಸ್ಥಾನಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಗಬೇಕು ಎಂದು ಕರೆ ನೀಡಿದರು. ಪಕ್ಷದ ಪ್ರಮುಖರಾದ ಶ್ರೀಪತಿ ಭಟ್ ಮಜಿಗುಂಡಿ, ಜಗದೀಶ ಸರಳಿಕುಂಜ, ಗಣಪತಿ ಭಟ್ ಮಜಿಗುಂಡಿ, ಅನಿಲ್ ಪರಿವಾರಕಾನ ಹಾಗೂ ಅಭ್ಯರ್ಥಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!
Scroll to Top