ಮಲಯಾಳಂನ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕೊಚ್ಚಿ, ಡಿ.24:ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ (40) ನಿಧನರಾಗಿದ್ದಾರೆ.ಶಾನವಾಸ್‌ ಅವರಿಗೆ ಶೂಟಿಂಗ್ ವೇಳೆ ಹೃದಯಾಘಾತ ಉಂಟಾಗಿ, ಆಸ್ಪತ್ರೆ ಸೇರಿದ್ದು ಬಳಿಕ ಬ್ರೈನ್ ಡೆಡ್ ಆಗಿ ಬುಧವಾರ ಸಾವಿಗೀಡಾಗಿದ್ದಾರೆ. ‘ಗಾಂಧಿರಾಜನ್‌’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದ ವೇಳೆ, ಚಿತ್ರೀಕರಣದ ಸೆಟ್‌ನಲ್ಲೇ ಅವರಿಗೆ ಮಂಗಳವಾರ ಹೃದಯಾಘಾತವಾಗಿತ್ತು.

ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ಇದ್ದ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಕೊಚ್ಚಿ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯದಲ್ಲೇ ಅವರಿಗೆ ಎರಡನೇ ಬಾರಿ ಹೃದಯಾಘಾತ ಆಯಿತು. ಅದರಿಂದ ಅವರ ಸ್ಥಿತಿ ಇನ್ನಷ್ಟು ಗಂಭೀರವಾಯಿತು. ಪರಿಣಾಮ, ಅವರು ಬುಧವಾರ ರಾತ್ರಿ 10.20ರ ಸುಮಾರಿಗೆ ನಿಧನರಾದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Also Read  ನರೇಂದ್ರ ಮೋದಿಯವರಿಗೆ ಶುಭಹಾರೈಸಿದ ಶ್ರೀಲಂಕಾ ಪ್ರಧಾನಿ

 

error: Content is protected !!
Scroll to Top