ಕಾಸರಗೋಡು : ಡಿವೈಎಫ್‍ಐ ಕಾರ್ಯಕರ್ತನ ಬರ್ಬರ ಹತ್ಯೆ ➤ ದಾಳಿ ನಡೆಸಿದವರಲ್ಲಿ ಓರ್ವ ಆರೋಪಿಗೂ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24:ಉಪ್ಪಳದ ಸೋಂಕಾಲು ಎಂಬಲ್ಲಿ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಕಳೆದ ದಿನ ರಾತ್ರಿ ಸುಮಾರು 11 ಘಂಟೆಯ ವೇಳೆಗೆ ನಡೆದಿದೆ.ಮೃತರನ್ನು ಅಬ್ದುಲ್ ರಹ್ಮಾನ್ (29) ಎಂದು ಗುರುತಿಸಲಾಗಿದೆ.

ದಾಳಿಯ ವೇಳೆ ಓರ್ವ ಆರೋಪಿಗೂ ಗಾಯಗಳಾಗಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಆರೋಪಿಯನ್ನು ಇರ್ಷಾದ್ (26) ಎಂದು ಗುರುತಿಸಲಾಗಿದೆ.ಕಲ್ಲೂರಾವಿ ನಿವಾಸಿ ರಹ್ಮಾನ್ ಬೈಕ್ ನಲ್ಲಿ ಸ್ನೇಹಿತನ ಜೊತೆ ಮನೆಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಕಲ್ಲೂರಾವಿ-ಹಳೆಕಡಪ್ಪುರ ಬಳಿ, ತಂಡವು ದಾಳಿ ನಡೆಸಿದೆ.ತಂಡವು ರಹ್ಮಾನ್ ಗೆ ಇರಿದು ಪರಾರಿಯಾಗಿದೆ. ಗಾಯಗೊಂಡಿದ್ದ ರಹ್ಮಾನ್ ರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಜೀವಂತವಾಗಿ ಉಳಿಯಲಿಲ್ಲ. ಜೊತೆಗಿದ್ದ ಶುಹೈಬ್ ಅವರೂ ಗಾಯಗೊಂಡಿದ್ದಾರೆ.

Also Read  ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ವಿತರಿಸಲು ಅರ್ಜಿ ಆಹ್ವಾನ

 

 

 

ಇತ್ತೀಚೆಗೆ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ವಿಜಯೋತ್ಸವ ವೇಳೆ ಡಿವೈಎಫ್ ಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆಯಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಮುಸ್ಲಿಂ ಲೀಗ್ ಕಾರ್ಯಕರ್ತರ ಕೈವಾಡದಿಂದ ಈ ಕೃತ್ಯ ನಡೆದಿರಬಹುದು ಎಂದು ಆರೋಪಿಸಲಾಗಿದೆ.ಘಟನೆಯ ಹಿನ್ನೆಲೆಯಲ್ಲಿ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಕರಣ ದಾಖಲಾಗಿದೆ.

error: Content is protected !!
Scroll to Top