ಪುತ್ತೂರು :ಬನ್ನೂರಿನಲ್ಲಿ ನಸುಕಿನ ಜಾವ ಚಿರತೆ ಪ್ರತ್ಯಕ್ಷ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.24: ಡಿ.23ರ ಕಳೆದ ದಿನ ಬೆಳಿಗ್ಗೆ ಬನ್ನೂರು ಹಲಂಗದಲ್ಲಿ ಚಿರತೆಯೊಂದು ಕಾಣಿಸಿ ಕೊಂಡಿರುವುದಾಗಿ ವರದಿಯಾಗಿದೆ. ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನಕ್ಕೆ ನಸುಕಿನ ಜಾವ ಭಕ್ತರೊಬ್ಬರು ಹೋಗುತ್ತಿದ್ದ ವೇಳೆ ಅವರಿಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಬಳಿಕ ಮಧ್ಯಾಹ್ನ ಮಾಜಿ ಪುರಸಭಾ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯೂ ಚಿರತೆ ಪ್ರತ್ಯಕ್ಷವಾಗಿದೆ.

ಚಿರತೆಯು ಮಾಜಿ ಪುರಸಭಾ ಸದಸ್ಯ ಹಲಂಗ ರಾಮಣ್ಣ ಗೌಡರ ಮನೆಯ ಬಳಿಯಿಂದ ಪಕ್ಕದ ತೆಂಗಿನ ಕೊಪ್ಪಳಕ್ಕೆ ಹೋಗಿದ್ದು ಅಲ್ಲಿಂದ ಡಂಪಿಂಗ್ ಯಾರ್ಡ್ ಪಕ್ಕದ ಗುಡ್ಡೆಗೆ ಹೋಗಿದೆ ಎನ್ನಲಾಗಿದೆ. ಮಾಹಿತಿ ಅರಿತ ಅರಣ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

Also Read  ಸುಳ್ಯ : ಪಯಸ್ವಿನಿ ನದಿಯಲ್ಲಿ ಮೀನುಗಳ ಮಾರಣಹೋಮ

error: Content is protected !!
Scroll to Top