ರಾಜ್ಯ ಪ್ರವಾಸೋದ್ಯಮ ಬೆಳವಣಿಗೆಗೆ ಚಿಂತನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರನ್ನೂ ಒಳಗೊಂಡ ಬೆಳವಣಿಗೆಗೆ ರಾಜ್ಯದ ಜನತೆಗೆ ಆರ್ಥಿಕ ಪ್ರಯೋಜನಗಳ ಲಾಭ ಒದಗಿಸುವ ಉದ್ದೇಶ ರಾಜ್ಯ ಸರ್ಕಾರ ಪರಿಚಯಿಸಿರುವ ಹೊಸ ‘ಕರ್ನಾಟಕ ಪ್ರವಾಸೋದ್ಯಮ ನೀತಿ 2020-25’ ಬೆಂಬಲಿಸಲಿರುವ ಓಯೊ ಹೋಟೆಲ್ಸ್ ಆಂಡ್ ಹೋಮ್ಸ್, ರಾಜ್ಯದಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.

ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಎಂ.ಲಕ್ಷ್ಮೀನಾರಾಯಣ ಅವರ ಜತೆಗೆ ನಡೆದ ಸಭೆಯಲ್ಲಿ, ರಾಜ್ಯದಲ್ಲಿ ತನ್ನ ಸೇವೆ ಮತ್ತು ವಹಿವಾಟು ವಿಸ್ತರಿಸುವುದರ ರೂಪುರೇಷೆಯನ್ನು ಕಂಪನಿಯು ವಿವರಿಸಿದೆ. ಸಮಾಲೋಚನೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮ ಕ್ಷೇತ್ರದಲ್ಲಿನ ಅವಕಾಶಗಳು ಮತ್ತು ಸರ್ಕಾರವು ತನ್ನ ‘ಒಂದು ರಾಜ್ಯ ಹಲವು ವಿಶ್ವ ಪ್ರಚಾರ ಅಭಿಯಾನದಡಿ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಾದ ಕೊಡಗು, ಮಂಗಳೂರು, ಉಡುಪಿ, ಮೈಸೂರು,ಬೆಂಗಳೂರು ಹುಬ್ಬಳ್ಳಿ ಪ್ರವಾಸೋದ್ಯಮ ರಂಗದಲ್ಲಿ ಆದ್ಯತಾ ತಾಣವಾಗಿ ಅಭಿವೃದ್ಧಿಪಡಿಸುವ ಯೋಜನೆ ಕಾರ್ಯಗತಗೊಳಿಸುವುದನ್ನು ಕೋವಿಡ್-19 ಪಿಡುಗಿನ ಸಂದರ್ಭದಲ್ಲಿ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ಮುಂದಾಗಿದೆ. ಓಯೊ ಇಂಡಿಯಾ ಆ?ಯಂಡ್ ಸೌತ್ ಏಷ್ಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿತ್ ಕಪೂರ್ ಸಮಾಲೋಚನೆ ಆಯೋಜಿಸಿದ್ದರು.

Also Read  2026ರ ಡಿಸೆಂಬರ್‌ಗೆ ನಮ್ಮ ಮೆಟ್ರೋ ಪಿಂಕ್ ಲೈನ್ ಆರಂಭ

error: Content is protected !!
Scroll to Top