ಗುತ್ತಿಗಾರು :ಮತಯಾಚಿಸಲು ಬರಬೇಡಿ ಎಂದು ಗೇಟಿಗೆ ಬೋರ್ಡ್ ➤ಮತದಾರನ ಬೋರ್ಡ್ ನೋಡಿ ಕಂಗಾಲದ ಅಭ್ಯರ್ಥಿಗಳು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ಡಿ.23: ಒಂದು ಕಡೆ ಗ್ರಾಮ ಪಂಚಾಯತ್ ಚುನಾವಣೆಗೆ ಸಿದ್ದತೆಗಳು ಬರದಿಂದ ಸಾಗುತ್ತಿದೆ. ಮತ್ತೊಂದು ಕಡೆ ಪುತ್ತೂರು, ಸುಳ್ಯ, ಕಡಬ ವ್ಯಾಪ್ತಿಯ ಹಲವು ಭಾಗಗಳಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ಗಳು ರಾರಾಜಿಸುತ್ತಿದೆ.ಸಮಸ್ಯೆಗಳಿಗೆ ಸ್ಪಂದಿಸದೆ ಕೇವಲ ಭರವಸೆ ಮಾತ್ರ ನೀಡುತ್ತಿರುವ ಜನಪ್ರತಿನಿಧಿಗಳ ಧೋರಣೆಗೆ ಬೇಸತ್ತು ಗುತ್ತಿಗಾರಿನಲ್ಲಿ ವ್ಯಕ್ತಿಯೋರ್ವರು ತಮ್ಮ ಮನೆಯ ಗೇಟಿಗೆ ಮತಯಾಚಿಸಲು ಬರಬೇಡಿ ಎಂದು ಬೋರ್ಡ್ ಅಳವಡಿಸಿದ್ದಾರೆ.

ಗುತ್ತಿಗಾರಿನ ರವೀಂದ್ರ ಎಂಬುವರು ತಮ್ಮ ಮನೆಗೆ ಬರುವ ದಾರಿಯ ಗೇಟಿನಲ್ಲಿ” ದಯವಿಟ್ಟು ಮತ ಯಾಚಿಸಲು ಬರಬೇಡಿ” ಎಂದು ಬೋರ್ಡ್ ಅಳವಡಿಸಿದ್ದಾರೆ.  ಇದನ್ನ ಕಂಡು ಮತಯಾಚಿಸಲು ಬಂದ ಅಭ್ಯರ್ಥಿಗಳು ಕಂಗಾಲಗಿದ್ದಾರೆ. ತನ್ನ ಮನೆಗೆ ಬರುವ ದಾರಿಯ ವಿಚಾರವಾಗಿ ಬಹು ಕಾಲದ ಸಮಸ್ಯೆಯನ್ನು ಗುತ್ತಿಗಾರು ಪಂಚಾಯತ್ ಗೆ ತಿಳಿಸಿದ್ದು.ಹಲವು ಬಾರಿ ಮನವಿ ನೀಡಿದ್ದರೂ ಈ ಸಮಸ್ಯೆಗೆ ಇನ್ನು ಪರಿಹಾರ ದೊರೆತಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣದಿಂದ ಈ ರೀತಿಯಾಗಿ ಬೋರ್ಡ್ ಅಳವಡಿಸಲಾಗಿದೆ ಎಂದು ರವೀಂದ್ರ ಅವರು ತಿಳಿಸಿದ್ದಾರೆ.

Also Read  ನೆಲ್ಯಾಡಿ: ಉಳಿತೊಟ್ಟು ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

 

 

error: Content is protected !!
Scroll to Top