ಸರ ಮತ್ತು ಬೈಕ್‌ ಕಳ್ಳತನ ಪ್ರಕರಣ ➤ ಮೂವರು ಆರೋಪಿಗಳು ಪೊಲೀಸರ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ನಗರದ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸರಕಳ್ಳತನ ಮತ್ತು ಬೈಕ್‌ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ನಗರ ಅಪರಾಧ ಪತ್ತೆದಳ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

 

ಪೆರ್ಮನ್ನೂರು ಚೆಂಬುಗುಡ್ಡೆಯ ಬಿ.ಕೆ.ಕಾಟೇಜ್‌ ನಿವಾಸಿ ಹಬೀಬ್‌ ಹಸನ್‌ ಆಲಿಯಾಸ್‌ ಅಬ್ಬಿ(39), ಬಿ.ಸಿ.ರೋಡ್‌ ಪಲ್ಲಮಜಲು ನಿವಾಸಿ ಅಬ್ದುಲ್‌ ಮನ್ನಾನ್‌ ಆಲಿಯಾಸ್‌ ಅಬ್ದುಲ್‌ ಮುನಾಫ್‌(32) ಮತ್ತು ಉಡುಪಿ ಪೆರ್ಡೂರು ಗ್ರಾಮ ಹಿರಿಯಡಕ ಅಲಂಕಾರು ಮನೆಯ ಮೊಹಮ್ಮದ್‌ ತೌಸಿಫ್‌ ಆಲಿಯಾಸ್‌ ಶೈಲು ಆಲಿಯಾಸ್‌ ಮುನ್ನ(28) ಬಂಧಿತರು.ಬಂಧಿತರಿಂದ ಒಟ್ಟು ಅಂದಾಜು 2.55 ಲ.ರೂ. ಮೌಲ್ಯದ ಎರಡು ಚಿನ್ನದ ಕರಿಮಣಿ ಸರಗಳು, ಕಳವು ಮಾಡಿದ ನಾಲ್ಕು ದ್ವಿಚಕ್ರ ವಾಹನ, ಅಪರಾಧ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ, 3 ಮೊಬೈಲ್‌ ಪೋನ್‌ ಸೇರಿದಂತೆ ಒಟ್ಟು ಅಂದಾಜು 5.19 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಮುಂದಿನ ಲಾಕ್ಡೌನ್ ನಿರ್ಧಾರದಿಂದ ಅನ್ಲಾಕ್ ಆದ ಕೇಂದ್ರ ಸರಕಾರ >ಲಾಕ್ಡೌನ್ ನಿರ್ಧರಿಸಲಿದೆಯೇ? ರಾಜ್ಯ ಸರಕಾರ

error: Content is protected !!
Scroll to Top