ಬಂಟ್ವಾಳ : ಶೇ.77.7 ಮಂದಿಯಿಂದ ಗ್ರಾ.ಪಂ ಹಕ್ಕು ಚಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಬಂಟ್ವಾಳ ತಾಲೂಕಿನ 57 ಗ್ರಾಪಂಗಳ 822 ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶೇ.77.7 ಮತದಾನವಾಗಿದೆ.

ಮಂಗಳವಾರ ಸಂಜೆ ಚುನಾವಣಾ ಶಾಖೆಯ ಕಂಟ್ರೋಲ್ ರೂಮ್ ನೀಡಿದ ಮಾಹಿತಿ ಪ್ರಕಾರ, ಒಟ್ಟು 2,77,133 ಮತದಾರರ ಪೈಕಿ 2,15,535 ಮಂದಿ ಮತ ಚಲಾಯಿಸಿದ್ದಾರೆ. ಇವರಲ್ಲಿ 1,04,156 ಪುರುಷರು, 1,11,376 ಮಹಿಳೆಯರು ಹಾಗೂ 3 ಇತರರು. ಮತದಾನ ಪೂರ್ಣಗೊಂಡ ಕೂಡಲೇ ಮತಪೆಟ್ಟಿಗೆಗಳನ್ನು ಭದ್ರಪಡಿಸಿ, ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿರುವ ಮೂರು ಸ್ಟ್ರಾಂಗ್ ರೂಮ್ ಗಳಿಗೆ ತರಲಾಯಿತು. ಮಂಗಳೂರು ಸಹಾಯಕ ಕಮಿಷನರ್ ಮದನ್ ಮೋಹನ್ ಸಿ., ತಹಶೀಲ್ದಾರ್ ಅನಿತಾಲಕ್ಷ್ಮೀ, ತಾ.ಪಂ. ಇಒ ರಾಜಣ್ಣ, ವಿವಿಧ ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಲವು ಮತಗಟ್ಟೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು.

Also Read  ಫೈರ್ ಆ್ಯಂಡ್ ಸೇಫ್ಟಿ, ಆತಿಥ್ಯ ಕ್ಷೇತ್ರದಲ್ಲಿ ಭವಿಷ್ಯದ ಭರವಸೆ IBVE

 

 

error: Content is protected !!
Scroll to Top