ದ.ಕ. ಜಿಲ್ಲೆಯಲ್ಲಿ ಕೊರೊನಾದ 2ನೇ ಅಲೆ ➤ ಬ್ರಿಟನ್‌ನಿಂದ ಮಂಗಳೂರಿಗೆ 56 ಪ್ರಯಾಣಿಕರ ಆಗಮನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23:  ಬ್ರಿಟನ್ ನಲ್ಲಿ ಕೊರೊನಾ ಮಾದರಿಯ ಎರಡನೇ ಅಲೆ ಎದ್ದಿದ್ದು, ಎಲ್ಲ ರಾಷ್ಟ್ರಗಳು ಮುನ್ನೆಚ್ಚರಿಕೆ ವಹಿಸಿವೆ. ಇದೇ ವೇಳೆ ಬ್ರಿಟನ್‌ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿದ್ದು, ದ.ಕ. ಜಿಲ್ಲೆಯಲ್ಲಿ ಕೊರೊನಾದ 2ನೇ ಅಲೆ ಭೀತಿ ಹುಟ್ಟಿಸಿದೆ.

ಬ್ರಿಟನ್ ಸಹಿತ ಹಲವು ದೇಶಗಳಿಂದ ಭಾರತೀಯರು ವಾಪಸಾಗುತ್ತಿದ್ದು, ಮಂಗಳೂರಿಗೂ 56 ಮಂದಿ ಬಂದಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‌ನೊಂದಿಗೆ ತಾಯ್ನಾಡು ಪ್ರವೇಶಿಸಿದ್ದಾರೆ. ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ಬ್ರಿಟನ್ ಏರ್‌ವೇಸ್, ಇಂಡಿಯನ್ ಏರ್ ಲೈನ್ಸ್ ಸಹಿತ ವಿವಿಧ ವಿಮಾನ ಯಾನ ಸೇವಾ ಸಂಸ್ಥೆಗಳ ಮೂಲಕ ಪ್ರಯಾಣಿಸಿದ್ದಾರೆ. ಡಿ.7ರಿಂದ ಇಲ್ಲಿಯವರೆಗೆ 56 ಮಂದಿ ಬಂದಿದ್ದಾರೆ. ಡಿ.21ರಂದೇ 15 ಮಂದಿ ಮಂಗಳೂರು ತಲುಪಿದ್ದಾರೆ. ಇವರೆಲ್ಲರೂ ಬೆಂಗಳೂರು ಮೂಲಕ ಮಂಗಳೂರಿಗೆ ಬಂದವರಾಗಿದ್ದಾರೆ ಎಂದರು.

Also Read  ಚಲಿಸುತ್ತಿದ್ದ ರೈಲಿನಲ್ಲಿ ಯುವಕನೋರ್ವನ ಪುಂಡಾಟ ➤ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ..!!

 

error: Content is protected !!
Scroll to Top