“ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ಫಿಟ್ ಇಂಡಿಯಾ ಸಪ್ತಾಹ”

(ನ್ಯೂಸ್ ಕಡಬ) newskadaba.cokm ಮಂಗಳೂರು ಡಿ. 22. ಭಾರತ ದೇಶದ ಪ್ರಜೆಗಳ ದೈಹಿಕ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ದೃಷ್ಠಿಯಿಂದ 2018ರ ಆಗೋಸ್ಟ್ 29ರ ರಾಷ್ಟ್ರೀಯ ಕ್ರೀಡಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಫಿಟ್‍ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಶಕ್ತಿನಗರದ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಮತ್ತು ಶಾಲಾ ಶಿಕ್ಷಕರ ದೈಹಿಕ, ಮಾನಸಿಕ, ಹಾಗು ಬೌದ್ಧಿಕ ಆರೋಗ್ಯದ ಹಿತದೃಷ್ಟಿಯಿಂದ “ಫಿಟ್‍ಇಂಡಿಯಾ ಸಪ್ತಾಹ” ದಿನಾಂಕ ಡಿ. 22 ರಿಂದ 30ರ ವರೆಗೆ ಒಂದು ವಾರಗಳ ಕಾಲ ನಡೆಯಲಿದೆ. ಈ ಪ್ರಯುಕ್ತ ಹಲವಾರು ವರ್ಚುವಲ್‍ ಕಾರ್ಯಕ್ರಮವನ್ನು ದೈಹಿಕ ಶಿಕ್ಷಕ ಶ್ರೀನಿವಾಸ್ ಬಿ.ಎಮ್‍ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದೆ.

ಫಿಟ್‍ನೆಸ್‍ ಕೋರ್ಡಿನೇಟರ್ ಸ್ವಾತಿ ಭರತ್‍ ಉತ್ತಮ ಆರೋಗ್ಯಕ್ಕೆ ದೈಹಿಕ, ಮಾನಸಿಕ ಸ್ವಾಸ್ಥ್ಯಕ್ಕೆ ವ್ಯಾಯಾಮ ಹಾಗೂ ಪೌಷ್ಠಿಕ ಆಹಾರ ಹಾಗೂ ಉತ್ತಮ ಹವ್ಯಾಸಗಳ ಮಹತ್ವವನ್ನು ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದರು. ದಿನಾಂಕ 22ರಂದು ವರ್ಚುವಲ್‍ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ, ಅನಂತರ ರೋಪ್, ಸ್ಕಿಪ್ಪಿಂಗ್, ಏರೋಬಿಕ್ಸ್, ವ್ಯಾಯಾಮ ಮೊದಲಾದ ದೈಹಿಕ ಚಟುವಟಿಕೆಗಳೊಂದಿಗೆ ನಿತ್ಯಜೀವನದಲ್ಲಿ ವ್ಯಾಯಾಮದ ಮಹತ್ವ ಎಂಬ ವಿಷಯದ ಬಗ್ಗೆ ಶಿಕ್ಷಕ ಭಾಸ್ಕರನ್‍ ಇವರೊಂದಿಗೆ ವಿದ್ಯಾರ್ಥಿಗಳ ಮುಕ್ತ ಸಂವಾದ ನೆರವೇರಲಿದೆ. ದಿನಾಂಕ 23ರಂದು ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹಾಗೂ ದೈಹಿಕ, ಮಾನಸಿಕ ಆರೋಗ್ಯಕ್ಕೆ ವ್ಯಾಯಾಮದ ಜೊತೆಗೆ ಉತ್ತಮ ಆಹಾರದ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ಆಹಾರ ಮತ್ತು ಪೋಷಣೆ ಎಂಬ ವಿಷಯದ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಯ ಆಹಾರತಜ್ಞರಾದ ಅರುಣ ಮಲ್ಯ ಇವರಿಂದ ವಿಚಾರ ಸಂಕಿರಣ ನೆರವೇರಲಿದೆ. ದಿನಾಂಕ 24ರಂದು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಟಗಳು ಹಾಗೂ ‘ಹಮ್ ಫಿಟ್ ಹೇತೋ ಇಂಡಿಯಾ ಫಿಟ್‘ ಎಂಬ ಶೀರ್ಷಿಕೆಯಡಿಯಲ್ಲಿ ಶಿಕ್ಷಕ ಪೂರ್ಣೇಶ್‍ ಇವರ ನೇತೃತ್ವದಲ್ಲಿ ನಡೆಯಲಿದೆ.

Also Read  ಉಡುಪಿ: ಸ್ವಚ್ಚತಾ ಕಾರ್ಮಿಕರೋರ್ವರಿಗೆ ಯುವತಿಯರಿಂದ ಹಲ್ಲೆ

ದಿನಾಂಕ 28ರಂದು ಪ್ರಸ್ತುತ ದಿನಗಳ ಈ ಸಾಮಾಜಿಕ ಪಿಡುಗಿನಿಂದ ಜನರಲ್ಲಿ ಉಂಟಾದ ಮಾನಸಿಕ ಒತ್ತಡವನ್ನು ಕೇಂದ್ರೀಕರಿಸಿ “ರಿ ಸ್ಟ್ರೆಂತನಿಂಗ್‍ ಆಫ್ ಮೈಂಡ್ ಪೋಸ್ಟ್ ಪ್ಯಾಂಡಮಿಕ್” ಎಂಬ ವಿಷಯದ ಬಗ್ಗೆ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ. ಇವರಿಂದ ವಿಚಾರ ಸಂಕಿರಣ ನೆರವೇರಲಿದೆ ಹಾಗೂ ‘ಫಿಟ್‍ ಇಂಡಿಯಾ ಅಭಿಯಾನದ ತಿಳುವಳಿಕೆ, ಮಹತ್ವದ ದೃಷ್ಟಿಯಿಂದ ಫಿಟ್‍ನೆಸ್ ಬೀಟ್ಸ್ ಎಂಬ ಶೀರ್ಷಿಕೆಯಡಿ  ಪ್ರಬಂಧ, ಕವನ, ಕಿರುಚಿತ್ರ ರಚನೆಯ ಸ್ಪರ್ಧೆಯು ಶಿಕ್ಷಕರಾದ ಅಕ್ಷತ ಎಂ.ಜಿ, ಶರಣಪ್ಪ ಹಾಗೂ ಭಾಸ್ಕರನ್‍ ಇವರ ನೇತೃತ್ವದಲ್ಲಿ ನೆರವೇರಲಿದೆ. ದಿನಾಂಕ 29ರಂದು ಶಿಕ್ಷಕಿ ದೀಪ್ತಿ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಆನ್‍ಲೈನ್‍ ರಸಪ್ರಶ್ನೆ ಹಾಗೂ ಹಲವಾರು ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

Also Read  ಶಿಕ್ಷಕ ದಿನಾಚರಣೆ- ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಗುರುವಂದನಾ ಕಾರ್ಯಕ್ರಮ

ದಿನಾಂಕ 30ರಂದು “ಫ್ಯಾಮಿಲಿ ಫಿಟ್‍ನೆಸ್” ಎಂಬ ಶೀರ್ಷಿಕೆಯೊಂದಿಗೆ ವಿದ್ಯಾರ್ಥಿಗಳು ತಮ್ಮ ಮನೆಯವರೊಂದಿಗೆ ಗೃಹೋಪಯೋಗಿ ವಸ್ತುಗಳನ್ನು ಬಳಸಿ, ಲಗೋರಿ, ಕ್ರಿಕೇಟ್, ಹಗ್ಗ –ಜಗ್ಗಾಟ ಮೊದಲಾದ ಮನೋರಂಜನಾತ್ಮಕ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವ ಸದಾವಕಾಶವನ್ನು ಶಾಲೆಯು ಕಲ್ಪಿಸಿದೆ. ದೇಶದ ವಿದ್ಯಾರ್ಥಿಗಳು ಹಾಗೂ ಯುವಜನತೆಯನ್ನು ಮಾನಸಿಕ, ಬೌದ್ಧಿಕ ಹಾಗೂ ದೈಹಿಕವಾಗಿ ನಿಷ್ಕ್ರಿಯ ಚೌಕಟ್ಟಿನಿಂದ ಸಕ್ರಿಯ ಪರಿಧಿಗೆ ತೊಡಗಿಸಿಕೊಳ್ಳುವಂತೆ ಮಾಡುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಈ ಫಿಟ್‍ನೆಸ್‍ ಇಂಡಿಯಾ ಸಪ್ತಾಹದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವನ್ನು ಸಾಕಾರಗೊಳಿಸುವ ಪ್ರಯತ್ನ ಶಕ್ತಿ ವಸತಿ ಶಾಲೆಯಿಂದ ನಡೆಯಲಿದೆ.

 

 

error: Content is protected !!
Scroll to Top