(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಡಿ.20. ತೀವ್ರ ಕುತೂಹಲ ಮೂಡಿಸಿದ್ದ ಕೌಕ್ರಾಡಿ ಗ್ರಾಮ ಪಂಚಾಯತ್ ಕ್ಷೇತ್ರದ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿ ಫಾರೂಕ್ ಎನ್.ಕೆ. ಹಿಂದೆ ಸರಿದಿದ್ದು, ನಾಮಪತ್ರ ಹಿಂಪಡೆದಿದ್ದಾರೆ.

ಕೌಕ್ರಾಡಿ ಗ್ರಾಮದ ಮೂರನೇ ವಾರ್ಡ್ ಎಲ್ಲಾ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿದ್ದು, ಇಲ್ಲಿ ಹಲವರು ನಾಮಪತ್ರ ಸಲ್ಲಿಸಿದ್ದರು. ಸ್ಥಳೀಯವಾಗಿ ಪ್ರಭಾವಿ, ಯುವ ನಾಯಕ, ಸಾಮಾಜಿಕ ಕಾರ್ಯಕರ್ತ ಉಮರುಲ್ ಫಾರೂಕ್ ಎನ್.ಕೆ. ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ಹಿಂಪದುಕೊಂಡಿದ್ದಾರೆ. ಜ್ಯಾತ್ಯಾತೀತ ಮತ ವಿಭಜನೆಯನ್ನು ತಡೆಯಲು ಮತದಾರರ ಮನವಿಯ ಮೇರೆಗೆ ಸ್ವ-ಇಚ್ಛೆಯಿಂದ ಹಿಂಪಡೆಯಲಾಯಿತು ಎಂದು ಅವರು ತಿಳಿಸಿದ್ದಾರೆ.
