ಚಿಕನ್ ವ್ಯಾಪಾರದ ಪಿಕಪ್ ವಾಹನ ಕದ್ದ ಕಳ್ಳರ ಬಂಧನ

(ನ್ಯೂಸ್ ಕಡಬ) newskadaba.com ಕೊಡಗು, ಡಿ.12: ಮಾಂಸಕ್ಕಾಗಿ ಕೋಳಿ ವ್ಯಾಪಾರ ಮಾಡಿ ನಿಲ್ಲಿಸಿದ್ದ ವ್ಯಾಪಾರಿಯ ಪಿಕಪ್ ವಾಹನವನ್ನೇ ಕಳ್ಳತನ ನಡೆಸಿ ನಕಲಿ ನಂಬರ್ ಪ್ಲೇಟ್ ಮಾಡಿ ಮಾರಟದ ವೇಳೆ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಬಂಧಿತರನ್ನು ಕಣ್ಣೂರಿನ ರೌಫ್,ಕರಿಕೆಯ ಅಬ್ದುಲ್ ಫಾರೂಕ್, ಸುಳ್ಯದ ಡೇವಿಡ್ ಎಂದು ಗುರುತಿಸಲಾಗಿದೆ.

 

ಕಳೆದ ಮೂರು ತಿಂಗಳ ಹಿಂದೆ ಕೋಳಿ ವ್ಯಾಪಾರ ಮುಗಿಸಿ ನಿಲ್ಲಿಸಿದ್ದ ವಾಹನ ಕಳುವಾಗಿದ್ದು,ಸಂಬಂಧ ಕುಶಾಲನಗರ ದಲ್ಲಿ ಪ್ರಕರಣ ದಾಖಲಾಗಿತ್ತು,ಅದರಂತೆ ಕೆಲವೊಂದು ದಾಖಲೆ ಮೂಲಕ ಎಲ್ಲಾ ಪೋಲಿಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು.ದಕ್ಷಿಣ ಕನ್ನಡ, ಸುಳ್ಯದಲ್ಲಿ ಪಿಕ್ ಅಪ್ ವಾಹನವೂಂದರ ಮಾರಾಟಕ್ಕೆ ವ್ಯಕ್ತಿ ಯತ್ನ ನಡೆಸುತ್ತಿರುವುದರ ಬಗ್ಗೆ ಮಾಹಿತಿ ಸಿಕ್ಕಿ ವಿಚಾರಿಸಿದ ಸಂದರ್ಭ ಅದೇ ವಾಹನ ಕುಶಾಲನಗರದಲ್ಲಿ ಇರುವುದು ತಿಳಿದು ವಾಹನ ಪತ್ತೆ ಹಚ್ಚಿ, ಕಣ್ಣೂರಿನ ರೌಫ್,ಕರಿಕೆಯ ಅಬ್ದುಲ್ ಫಾರೂಕ್,ಸುಳ್ಯದ ಡೇವಿಡ್ ರನ್ನು ಬಂದಿಸಿದ್ದು ವಾಹನ ವಶಕ್ಕೆ ಪಡೆಯಲಾಗಿದೆ.

Also Read  ಕೋಚಕಟ್ಟೆ: ವಿದ್ಯುತ್ ಪರಿವರ್ತಕ ಉದ್ಘಾಟನೆ

 

 

 

 

error: Content is protected !!