ಆತ್ಮ ಹತ್ಯೆಗೆ ಶರಣಾದ ಬಾಲಿವುಡ್ ನಟಿ.!

(ನ್ಯೂಸ್ ಕಡಬ) newskadaba.com ಮುಂಬೈ, ಡಿ.12: ‘ಡರ್ಟಿ ಪಿಕ್ಚರ್’ ಸೇರಿದಂತೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಬೆಂಗಾಲಿ ನಟಿ ಆರ್ಯ ಬ್ಯಾನರ್ಜಿ ಕೊಲ್ಕತ್ತಾದ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಪಾರ್ಟ್​ಮೆಂಟ್​ನಲ್ಲಿರುವ ತಮ್ಮ ಫ್ಲ್ಯಾಟ್​ನಲ್ಲಿ ಒಂಟಿಯಾಗಿ ಬದುಕುತ್ತಿದ್ದ ಆರ್ಯ ಬ್ಯಾನರ್ಜಿ ಶುಕ್ರವಾರ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೂರನೇ ಮಹಡಿಯಲ್ಲಿದ್ದ ಆರ್ಯ ಅವರ ಫ್ಲ್ಯಾಟ್​ನ ಬಾಗಿಲು ಮುರಿದು ಪೊಲೀಸರು ಒಳಗೆ ಹೋದಾಗ ಆಕೆ ಬೆಡ್​ರೂಂನಲ್ಲಿ ಮೃತಪಟ್ಟಿರುವುದು ಖಚಿತವಾಗಿದೆ.

33 ವರ್ಷದ ಆರ್ಯ ಬ್ಯಾನರ್ಜಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರ್ಯ ಅವರ ಮನೆ ಕೆಲಸದಾಕೆ ಶುಕ್ರವಾರ ಬೆಳಗ್ಗೆ ಎಷ್ಟೇ ಬಾಗಿಲು ಬಡಿದರೂ ಬಾಗಿಲು ಓಪನ್ ಆಗದ ಕಾರಣ ಆಕೆ ಅನುಮಾನಗೊಂಡು, ಅಕ್ಕಪಕ್ಕದವರಿಗೆ ತಿಳಿಸಿದ್ದಳು. ಆಗ ನೆರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಆ ಮನೆಯಲ್ಲಿ ಏಕಾಂಗಿಯಾಗಿದ್ದ ಆರ್ಯ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.33 ವರ್ಷದ ಆರ್ಯ ಬ್ಯಾನರ್ಜಿ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಆರ್ಯ ಅವರ ಮನೆ ಕೆಲಸದಾಕೆ ಶುಕ್ರವಾರ ಬೆಳಗ್ಗೆ ಎಷ್ಟೇ ಬಾಗಿಲು ಬಡಿದರೂ ಬಾಗಿಲು ಓಪನ್ ಆಗದ ಕಾರಣ ಆಕೆ ಅನುಮಾನಗೊಂಡು, ಅಕ್ಕಪಕ್ಕದವರಿಗೆ ತಿಳಿಸಿದ್ದಳು. ಆಗ ನೆರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಆ ಮನೆಯಲ್ಲಿ ಏಕಾಂಗಿಯಾಗಿದ್ದ ಆರ್ಯ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

Also Read  ಸುಳ್ಯ: ಬೈಕ್ ಅಪಘಾತ ➤ ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು

 

 

 

error: Content is protected !!
Scroll to Top