ಪುತ್ತೂರು :ಸಾರಿಗೆ ನೌಕರರ ದಿಢೀರ್ ಮುಷ್ಕರ.!

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.12: ಸಾರಿಗೆ ನೌಕರರ ಮುಷ್ಕರದ ಬಿಸಿ ಕರಾವಳಿಗೂ ತಟ್ಟಿದೆ. ಇಂದು ಪುತ್ತೂರಿನಲ್ಲಿ  KSRTC ಬಸ್ಸ್ ಗಳು ರಸ್ತೆಗಿಳಿಯದೆ ಬೆಂಬಲ ಸೂಚಿಸಿದೆ. ಆದರೆ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪುತ್ತೂರಿನ KSRTC ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದ ಬಸ್ಸ್ಗಳು ಕಂಡು ಬಂದಿರಲಿಲ್ಲ. ಬಳಿಕ ಡಿಪೋದಿಂದ ಬಸ್ ಗಳನ್ನು ತಂಗುದಾಣಕ್ಕೆ ತಂದು ಮುಷ್ಕರದಲ್ಲಿ ತೊಡಗಿಕೊಂಡಿದ್ದಾರೆ.

ಇದರಿಂದ ಜನಸಾಮಾನ್ಯ ಪ್ರಯಾಣಿಕರು ಬಸ್ ಗಾಗಿ ಕಾಯುತ್ತಿದ್ದು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ದಿಢೀರ್ ಮುಷ್ಕರದಿಂದ ಮುಂಜಾನೆಯೇ KSRTC ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೋ ಮೆನೇಜರ್ ಅಧಿಕಾರಿ ವರ್ಗದವರು KSRTC ತಂಗುದಾಣಕ್ಕೆ ಆಗಮಿಸಿದ್ದಾರೆ.

 

 

Scroll to Top