ಮೂರು ವರುಷದ ಪ್ರೀತಿಗೆ ಮನೆಯವರಿಂದ ಸಮ್ಮತಿ ➤ ಆದರೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವತಿ.?!!

(ನ್ಯೂಸ್ ಕಡಬ) newskadaba.com ಉಡುಪಿ, ಡಿ.11: ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕನ ಜೊತೆ ಇನ್ನೇನು ಹಸಮಣೆಗೇರಬೇಕಾಗಿದ್ದ ಯುವತಿ ಬಾವಿಗೆ ಹಾರಿ ಅತ್ಮಹತ್ಯೆಗೆ ಶರಣಾಗಿದ್ದಾಳೆ.ಉಡುಪಿ ಜಿಲ್ಲೆಯ ಅಮಾವಸ್ಯೆಬೈಲ್ ಬಳಿಯ ಹುಣೆಸೆಮನೆಯ ಜಡ್ಡಿನಗುಡ್ಡೆಯ ಇಪ್ಪತ್ತೊಂದು ವರ್ಷದ ದಿವ್ಯಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾಳೆ.ದಿವ್ಯಾ ಬಿ ಕಾಂ ಅಂತಿಮ ವರ್ಷದ ಕಲಿಯುತ್ತಿದ್ದು ಕಳೆದ ಮೂರು ವರ್ಷಗಳಿಂದ ಹತ್ತಿರದ ಸಂಬಂಧಿ ಯುವಕನನ್ನು ಪ್ರೀತಿಸುತ್ತಿದ್ದಳು.

ಇಬ್ಬರ ಮನೆಯಲ್ಲಿಯೂ ಪ್ರೀತಿಗೆ ಒಪ್ಪಿಗೆ ಇತ್ತು.ಸದ್ಯದಲ್ಲೇ ಇಬ್ಬರ ಮದುವೆ ನೆರವೇರಿಸುವುದಾಗಿ ಮನೆಯ ಹಿರಿಯರು ನಿಶ್ಚಯಿಸಿದ್ದರು.ಅದ್ರೆ ಏಕಾಏಕಿ ಕಾಲೇಜಿನಿಂದ ಬಂದ ದಿವ್ಯಾ ಮನೆ ಪಕ್ಕದಲ್ಲಿದ್ದ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಗೂ ಮುನ್ನ ದಿವ್ಯಾ ಮಾನಸಿಕವಾಗಿ ನೊಂದಿದ್ದಳು ಎಂದು ಮನೆಯವರು ತಿಳಿಸಿದ್ದಾರೆ.ಸದಾ ಲವಲವಿಕೆಯಿಂದಿರುವ ದಿವ್ಯಾ ಯಾವುದೇ ವಿಷಯವನ್ನು ತಿಳಿಸದೇ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರಿಗೆ ಅಘಾತ ತಂದಿದೆ.ಅಮಾವಾಸ್ಯೆ ಬೈಲ್ ಪೊಲೀಸ್ ಠಾಣಾ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದು,ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಪೊಲೀಸರ ತನಿಖೆ ಬಳಿಕವಷ್ಟೆ ಬೆಳಕಿಗೆ ಬರಬೇಕಿದೆ.

Also Read  ತ್ರೈಮಾಸಿಕ ಕೆಡಿಪಿ ಸಭೆ 11ರಂದು

 

Xl

error: Content is protected !!
Scroll to Top