ಮೈಸೂರು-ಮಂಗಳೂರಿಗೆ ವಿಮಾನಯಾನ ಆರಂಭ ➤ಸಂಸದ ಪ್ರತಾಪ್ ಸಿಂಹ ರಿಂದ ಹಸಿರು ನಿಶಾನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11: ಮೈಸೂರಿನಿಂದ ಮಂಗಳೂರಿಗೆ ಹೊರಡುವ ಅಲೈಯನ್ಸ್ ಏರ್ ಸಂಸ್ಥೆಯ ವಿಮಾನಯಾನಕ್ಕೆ ಪ್ರತಾಪ್ ಸಿಂಹ ಹಸಿರು ನಿಶಾನೆ ತೋರಿಸಿದ್ದಾರೆ.

ಇಂದು ಚಾಲನೆ ದೊರೆತ ದಿನವೇ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರಕಿದೆ. ಇನ್ನು ಮೈಸೂರಿನಿಂದ ಮಂಗಳೂರಿಗೆ 33 ಟಿಕೆಟ್ ಬುಕ್ ಆಗಿದ್ದು, 23 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ಮಾತ್ರ ಈ ವಿಮಾನ ಹಾರಾಡಲಿದೆ. ಬೆಳಿಗ್ಗೆ 11.20 ಗಂಟೆಗೆ ಮೈಸೂರಿನಿಂದ ಹೊರಡುವ ವಿಮಾನವು ಮಧ್ಯಾಹ್ನ 12.30 ಗಂಟೆಗೆ ಮಂಗಳೂರು ತಲುಪಲಿದೆ. ಅದರಂತೆ, ಮಧ್ಯಾಹ್ನ 12-55 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 1.55 ಗಂಟೆಗೆ ಮೈಸೂರು ತಲುಪಲಿದೆ ಎಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ ತಿಳಿಸಿದ್ದಾರೆ.

Also Read  ಮಂಗಳೂರು: ಪೊಲೀಸ್ ಬಸ್ - ಲಾರಿ‌ ಢಿಕ್ಕಿ ► ನಾಲ್ವರು ಗಂಭೀರ

error: Content is protected !!
Scroll to Top