ತೆಲುಗು ನಟನಿಂದ ಸಾಹಸ ಸಿಂಹ ವಿಷ್ಣುವರ್ಧನ್​ ಅವಹೇಳನ ➤ ನವರಸ ನಾಯಕ ಜಗ್ಗೇಶ್ ಕೆಂಡಾಮಂಡಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.11: ತಮ್ಮ ಅಭಿನಯ ಹಾಗೂ ಸರಳ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಡಾ. ವಿಷ್ಣುವರ್ಧನ್​​ ಕನ್ನಡಿಗರ ಪಾಲಿನ ಆರಾಧ್ಯ ದೈವ. ಸಾಹಸಸಿಂಹ, ಕೋಟಿಗೊಬ್ಬ, ಅಭಿನಯ ಭಾರ್ಗವ, ದಾದಾ ಎಂದೆಲ್ಲಾ ಪ್ರೀತಿಯಿಂದ ಕರೆಸಿಕೊಳ್ಳುವ ಡಾ. ವಿಷ್ಣುವರ್ಧನ್ ರವರ ಬಗ್ಗೆತೆಲುಗು ನಟನೊಬ್ಬ ವಿಷ್ಣುವರ್ಧನ್ ವ್ಯಕ್ತಿತ್ವದ ಬಗ್ಗೆ ನೀಚವಾಗಿ ಮಾತನಾಡಿರುವುದು ಕನ್ನಡಿಗರನ್ನು ಕೆಣಕಿದೆ. ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ರಂಗರಾಜು ಎಂಬಾತ, ಸಂದರ್ಶನವೊಂದರಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾನೆ. ಈ ವಿಡಿಯೋ ವಿರುದ್ಧ ಹಲವಾರು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಹಿರಿಯ ನಟ ಜಗ್ಗೇಶ್ ಸಹ ವಿಷ್ಣುವರ್ಧನ್ ಬಗ್ಗೆ ಮಾತನಾಡಿರುವ ಆ ನಟನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

Also Read  ಮಂಗಳೂರು: ಕಳೆದುಹೋದ ಮೊಬೈಲ್ ಪತ್ತೆಗಾಗಿ ವಾಟ್ಸಪ್ ಸಹಾಯ ವಾಣಿ

ವಿಷ್ಣುವರ್ಧನ್ ಕುರಿತು ನಾಲಿಗೆ ಹರಿಬಿಟ್ಟ ನಟ ವಿಜಯ್ ರಂಗರಾಜು ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್, ‘ಇವನ್ಯಾರೊ ಕಲಾವಿದನಂತೆ, ಈ ದರಿದ್ರ ಮುಖ ಯಾವ ಚಿತ್ರದಲ್ಲು ನೋಡಿದ ನೆನಪಿಲ್ಲಾ. ಕನ್ನಡದ ಹೃದಯಗಳೇ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ದೂಷಣೆಗೆ ಹಿಂಜರಿಯುವಂತೆ ಉತ್ತರಿಸಿ’ ಎಂದು ಕರೆ ನೀಡಿದ್ದಾರೆ ಜಗ್ಗೇಶ್.ಇವನ ಉದ್ಧಟತನದ ಮಾತಿಗೆ ಕ್ಷಮೆಯಿಲ್ಲ, ‘ನತದೃಷ್ಟ ಶಿಕಾಮಣಿ ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯು ಸಲ್ಲದವ, ಇವನ ಉದ್ದಟತನ ಮಾತಿಗೆ ಕ್ಷಮೆಯಿಲ್ಲಾ ಸತ್ತವರು ದೇವರ ಸಮ. ದುಃಖವಾಯಿತು’ ಎಂದಿದ್ದಾರೆ ನಟ ಜಗ್ಗೇಶ್.ವಿಡಿಯೋ ವಿರುದ್ಧ ಕ್ರಮಕ್ಕೆ ಒತ್ತಾಯಿಸಲು ಕರೆ ನೀಡಿದ್ದಾರೆ.

Also Read  ಸವಣೂರು: ಮಿನಿಡಂಪರ್ ಆವಿಷ್ಕಾರ ಮಾಡಿದ ಯುವಕನಿಗೆ ಶಾಸಕ ವೇದಾವ್ಯಾಸ ಕಾಮತ್ ನೆರವು

 

error: Content is protected !!
Scroll to Top