ಮುಲ್ಕಿ :ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೂಲಿಕಾರ್ಮಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11:ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ನಾಡು ಗುಡ್ಡೆ ಹಾಡಿಯಲ್ಲಿ ಕೂಲಿಕಾರ್ಮಿಕ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಮುಲ್ಕಿ ಕೆಎಸ್ ರಾವ್ ನಗರ ನಿವಾಸಿ ಕೃಷ್ಣ ಪೂಜಾರಿ (58) ಗುರುತಿಸಲಾಗಿದೆ.

ಮೃತ ಕೃಷ್ಣ ಪೂಜಾರಿ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ತಿಂಗಳ ಹಿಂದೆ ಕೋಲ್ನಾಡು ಹೋಯಿಗೆ ಫ್ಯಾಕ್ಟರಿಯಲ್ಲಿ ಕೆಲಸಕ್ಕಿದ್ದು ಬಳಿಕ ಫ್ಯಾಕ್ಟರಿ ಮುಚ್ಚುಗಡೆಯಾದ ಬಳಿಕ ಪೈಪ್ ಕಂಪನಿಯೊಂದರಲ್ಲಿ ಮಾಡುತ್ತಿದ್ದರು.ಕಂಪನಿ ಮುಚ್ಚುಗಡೆಯಾದ ಬಳಿಕ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಸಬಳೂರು: ಶ್ರೀ ರಾಮ ಗೆಳೆಯರ ಬಳಗ ಸಾಮೂಹಿಕ ಗೋಪೂಜೆ, ಧಾರ್ಮಿಕ ಸಭೆ, ದೀಪಾವಳಿ ಕ್ರೀಡೋತ್ಸವ

error: Content is protected !!
Scroll to Top