ಉಡುಪಿ :ಸಿಡಿಲು ಬಡಿದು ವರ್ಕ್ ಫ್ರಂ ಹೋಮ್ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಡಿ.11: ಸಿಡಿಲು‌ ಬಡಿದು‌ ಯುವಕನೋರ್ವ ಸಾವನ್ನಪ್ಪಿದ ಘಟನೆ ವಂಡಾರಿನ ಬೋರ್ಡಕಲ್ಲಿನಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಸ್ಥಳೀಯ ನಿವಾಸಿ‌ ಸಾಫ್ಟ್ ವೇರ್ ಇಂಜಿನಿಯರ್ ಚೇತನ್ (24) ಮೃತಪಟ್ಟ ಯುವಕ.

 

ಇವರು ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿದ್ದು ಕೊರೊನಾ ಸಮಸ್ಯೆಯ ಅನಂತರ ಹಲವು ತಿಂಗಳಿಂದ ಮನೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದರು.ಮನೆಯೊಳಗಡೆ ಲ್ಯಾಪ್‌ಟಾಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಸಿಡಿಲಿನ‌ ಹೊಡೆತಕ್ಕೆ ಒಳಗಾಗಿ ಗಂಭೀರವಾಗಿ ಅಸ್ವಸ್ಥತಗೊಂಡಿದ್ದು ತಕ್ಷಣ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಚೇತನ್ ಮೃತಪಟ್ಟಿರುವುದಾಗಿ ತಿಳಿಸಿದರು.

Also Read  ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಗಿರಿಜನ ರೇಷ್ಮೆ ವಿಸ್ತರಣಾ ಕೇಂದ್ರ ಪುತ್ತೂರು➤ ಹಳೆಯ ಅನುಪಯುಕ್ತ ವಸ್ತುಗಳಬಹಿರಂಗ ಹರಾಜು

 

error: Content is protected !!
Scroll to Top