ಗೃಹರಕ್ಷಕರು ಚುನಾವಣಾ ಕರ್ತವ್ಯ ನಿರ್ವಹಿಸಿ- ಚೂಂತಾರು 

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.11: ಪ್ರತಿಯೊಬ್ಬ ಗೃಹರಕ್ಷಕರು ಚುನಾವಣಾ ಕರ್ತವ್ಯವನ್ನು ನಿರ್ವಹಿಸಬೇಕು ಮತ್ತು ಗುರುತಿನ ಚೀಟಿಯನ್ನು ಪಡೆಯದ ಗೃಹರಕ್ಷಕರು ಜಿಲ್ಲಾ ಗೃಹರಕ್ಷಕದಳ ಕಛೇರಿಗೆ ಬಂದು ಗುರುತಿನ ಚೀಟಿಯನ್ನು ಪಡೆದುಕೊಳ್ಳಬೇಕಾಗಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಸೂಚಿಸಿದರು.

ಅವರು ಡಿಸೆಂಬರ್ 10 ರಂದು ಸುಳ್ಯ ಘಟಕಕ್ಕೆ ಭೇಟಿ ನೀಡಿ ಗ್ರಾಮ ಪಂಚಾಯತ್ ಚುನಾವಣಾ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸುವ ಬಗ್ಗೆ ಚರ್ಚಿಸಿದರು ಹಾಗೂ ಗೃಹರಕ್ಷಕರ ಕುಂದು ಕೊರತೆಗಳನ್ನು ಆಲಿಸಿದರು.ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ ಹಾಗೂ ಸುಳ್ಯ ಘಟಕದ ಗೃಹರಕ್ಷಕರು ಉಪಸ್ಥಿತರಿದ್ದರು.

Also Read  ಮಹಿಳೆಯರಿಬ್ಬರಿಂದ ಮಗು ಅಪಹರಣಕ್ಕೆ ಯತ್ನ..!

 

error: Content is protected !!
Scroll to Top