ಕಾಲೇಜು ವಿದ್ಯಾರ್ಥಿಗಳಿಗೆ ಆಫರ್ ನೀಡಿದ ಕೆಎಸ್ಸಾರ್ಟಿಸಿ ➤ ಡಿ.31ರ ವರೆಗೆ ಹಳೆಯ ಬಸ್ ಪಾಸ್ ಇದ್ದರೆ ಉಚಿತ ಪ್ರಯಾಣ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.11. ರಾಜ್ಯದಲ್ಲಿ ಕೆಲವು ಕಾಲೇಜುಗಳು ಆರಂಭಗೊಂಡಿದ್ದು, ಶೈಕ್ಷಣಿಕ ಹಿತದೃಷ್ಠಿಯಿಂದ ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಕಳೆದ ವರ್ಷದ (2019-20ನೇ ಸಾಲಿನ) ಪಾಸನ್ನು ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ ಕೆಎಸ್ಸಾರ್ಟಿಸಿ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳು ಪ್ರಸಕ್ತ ವರ್ಷದಲ್ಲಿ ಕಾಲೇಜುಗಳಿಗೆ ದಾಖಲಾಗಿರುವ ಶುಲ್ಕ ಪಾವತಿ ರಶೀದಿಯೊಂದಿಗೆ ಈ ಹಿಂದಿನ ಸಾಲಿನ ಬಸ್ ಪಾಸ್ ತೋರಿಸಿ, ಡಿಸೆಂಬರ್ 31 ರ ವರೆಗೆ ಸಂಬಂಧಪಟ್ಟ ಮಾರ್ಗದಲ್ಲಿ ಕರಾರಸಾ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಪ್ರಯಾಣಿಸಬಹುದು ಎಂದು ಕೆಎಸ್ಸಾರ್ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ತರಕಾರಿ ಸಾಗಾಟದ ಲಾರಿ ಪಲ್ಟಿ ➤ ಚಾಲಕ ಮೃತ್ಯು

error: Content is protected !!
Scroll to Top