ಕಡಬ: 108 ಆಂಬ್ಯುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ…‼️

(ನ್ಯೂಸ್ ಕಡಬ) newskadaba.com ಕಡಬ, ಡಿ.09. ಕಡಬದ 108 ಅಂಬ್ಯುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆಯೋರ್ವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರದಂದು ನಡೆದಿದೆ.

ಎಡಮಂಗಲ ಡೆಕ್ಕಳ ನಿವಾಸಿ ಹರಿಪ್ರಸಾದ್ ಎಂಬವರ ಪತ್ನಿ ಹೇಮಲತಾ ಎಂಬಾಕೆ ಮೊದಲ ಹೆರಿಗೆಗೆಂದು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ತಪಾಸಣೆ ನಡೆಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದುದರಿಂದ ಪುತ್ತೂರು ಅಥವಾ ಸುಳ್ಯಕ್ಕೆ ಕರೆದೊಯ್ಯಲು ಸೂಚಿಸಿದ್ದು, ಅದರಂತೆ ಕಡಬದ 108 ಅಂಬ್ಯುಲೆನ್ಸ್ ನಲ್ಲಿ ತೆರಳುತ್ತಿದ್ದಾಗ ಐವರ್ನಾಡು ಸಮೀಪ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಹುಷಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸುಸೂತ್ರ ಹೆರಿಗೆಯಾಗುವಲ್ಲಿ EMT ಪ್ರಜ್ಞಾ ಹಾಗೂ ಪೈಲಟ್ ರಾಜೇಶ್ ಸಹಕರಿಸಿದ್ದಾರೆ

Also Read  'ರಾಜ್ಯದ ಸ್ವಚ್ಛ ಗ್ರಾಮ' ಖ್ಯಾತಿಯ ಕಡಬದಲ್ಲೀಗ ಮರೀಚಿಕೆಯಾಗಿರುವ ಸ್ವಚ್ಛತೆ ► ಬಯಲು ಶೌಚದ ದುರ್ನಾಥದಿಂದ ಮೂಗು ಮುಚ್ಚಿಕೊಂಡು ತೆರಳಬೇಕಾದ ಅನಿವಾರ್ಯತೆ

error: Content is protected !!
Scroll to Top