ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ಹಿನ್ನಲೆ ➤ ಎಡೆಸ್ನಾನ, ಡಿಸಿ ಜತೆ ಚರ್ಚಿಸಿ ಅಂತಿಮ ತೀರ್ಮಾನ – ಡಾ.ಯತೀಶ್‌ ಉಳ್ಳಾಲ್‌

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.09: ಕೊರೊನಾದ ಕಾರಣದಿಂದ ಈ ಬಾರಿ ಎಡೆಸ್ನಾನವನ್ನು ಮೊಟಕುಗೊಳಿಸಲು ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈ ಬಾರಿ ಬೀದಿ ಬದಿ ವ್ಯಾಪಾರಕ್ಕೆ ಮತ್ತು ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್‌ ಉಳ್ಳಾಲ್‌ ಹೇಳಿದರು.

 

Xl

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ದೇವಳದ ಮೇಲ್ಮಹಡಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್‌.ಅಂಗಾರ ಅಧ್ಯಕ್ಷತೆ ವಹಿಸಿ, ಜಾತ್ರಾ ಸಂದರ್ಭದಲ್ಲಿಆಗಮಿಸುವ ಅಧಿಕ ಭಕ್ತ ವೃಂದಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಸೃಷ್ಟಿಯಾಗದಂತೆ ಕ್ರಮ ವಹಿಸುವುದು ಅತ್ಯಗತ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

Also Read  ಮಂಗಳೂರು ನಗರ ಭಾಗದ ರೈಲ್ವೇ ಲೈನ್ ಗಳನ್ನು ದಕ್ಷಿಣ ರೈಲ್ವೆಯ ಬದಲಿಗೆ ನೈರುತ್ಯ ರೈಲ್ವೇ ಅಡಿಯಲ್ಲಿ ಕಾರ್ಯನಿರ್ವಹಿಸಲು ಸದನದಲ್ಲಿ ಚೌಟ ಪ್ರಸ್ತಾಪ

 

error: Content is protected !!
Scroll to Top