ಕಾಸರಗೋಡು :ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ವಿದ್ಯಾನಗರ, ಡಿ.09: ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನಿಸಿದ್ದ ಓರ್ವ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಕೊಲ್ಲಂಪಾಡಿಯ ಅಬ್ದುಲ್ ಖಾದರ್ (31) ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳಿಗೆ ಪರಿಚಯವಾಗಿದ್ದ. ಆಕೆಯ ಸ್ನೇಹ ಬೆಳೆಸಿ ಖಾಸಗಿ ಫೋಟೋವನ್ನು ಪಡೆದುಕೊಂಡಿದ್ದ. ಅವುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸುವುದಾಗಿ ಬೆದರಿಸಿದ್ದ ಆರೋಪಿಯು 25 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಯುವತಿಯು ವಿದ್ಯಾನಗರ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಬ್ದುಲ್ ಖಾದರ್‌ನನ್ನು ಬಂಧಿಸಿದ್ದಾರೆ.

Also Read  ಗೃಹರಕ್ಷಕ ಹಮೀದ್ ಪಾವಲರವರಿಗೆ ಸನ್ಮಾನ

 

error: Content is protected !!
Scroll to Top