ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾ. ಪಂ ಎದುರು ಧರಣಿ ಸತ್ಯಾಗ್ರಹ.!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.09: ಕಸ್ತೂರಿ ರಂಗನ್ ವರದಿ ಅನುಷ್ಠಾನದ ವಿರುದ್ಧ ಈಗಾಗಲೇ ಹೋರಾಟ ನಡೆಯುತ್ತಿದೆ. ಕಸ್ತೂರಿ ರಂಗನ್ ವರದಿ ಜಾರಿಯಾಗುವುದರಿಂದ ಹಲವಾರು ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ಎದುರಾಗುತ್ತದೆ ಎಂದು ಹೋರಾಟ ನಡೆಯುತ್ತಿದೆ.  ಕರವಾಳಿಯದ್ಯಂತ ಸುಳ್ಯ, ಕಡಬ , ವೆಳ್ತಂಗಡಿ ತಾಲೂಕುಗಳ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳ ಪಂಚಾಯತ್ ಎದುರು ಧರಣಿ ಸತ್ಯಾಗ್ರಹ ಕೈಗೊಳ್ಳುವುದು ಮತ್ತು ಸತ್ಯಾಗ್ರಹಕಕ್ಕೆ ಚುನಾವಣೆ ಸ್ಪರ್ಧಿಸುವ ವಿವಿಧ ಅಭ್ಯರ್ಥಿಗಳು ವರದಿ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಸುಬ್ರಹ್ಮಣ್ಯದಲ್ಲಿ ಡಿ.08 ರ ಕಳೆದ ದಿನ ಸಭೆಯಲ್ಲಿ ತೀರ್ಮಾನಿಸಿ ವೇದಿಕೆ ಕಲ್ಪಿಸಿಕೊಟ್ಟಿದೆ.

Also Read  ರೌಡಿಶೀಟರ್ ಪವನ್ ರಾಜ್ ಕೊಲೆ ಆರೋಪಿಗಳ ಬಂಧನ

ವೇದಿಕೆಯ ಕಾರ್ಯಕರ್ತರು ಮತು ಹಿತೈಷಿಗಳ ಮನೆಗೆ ಅಭ್ಯರ್ಥಿಗಳು ಮತಯಾಚನೆಗೆ ಮನೆಬೇಟಿ ಸಂದರ್ಭ ಕಸ್ತೂರಿ ರಂಗನ್ ವರದಿ ಬಗ್ಗೆ ತಮ್ಮ ನಿಲುವು ಕುರಿತು ಲಿಖಿತವಾಗಿ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ಅಭಿಯಾನ ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಇನ್ನು ಈ ಸಭೆಯಲ್ಲಿ ವೇದಿಕೆ ಸಂಚಾಲಕ ಕಿಶೋರ್ ಶಿರಡಿ, ಸುಳ್ಯ ತಾಲೂಕು ಭಾನುಪ್ರಕಾಶ್ ಪೆರುಮುಂಡ, ಮಡಿಕೇರಿ ತಾಲೂಕು ಸಂಚಾಲಕ ಬನ್ನೂರುಪಟ್ಟೆ ಪ್ರದೀಪ್ ಕರಿಕೆ, ಜಿಲ್ಲಾ ಸಮಿತಿ ಸದಸ್ಯರುಗಳು ಸೇರಿದಂತೆ ಆನೇಕರು ಉಪಸ್ಥಿತರಿದ್ದರು.

 

error: Content is protected !!
Scroll to Top