ಕುಕ್ಕೆ ಸುಬ್ರಹ್ಮಣ್ಯ :ಹುಂಡಿ ಎಣಿಕೆ ವೇಳೆ ಹಣ ಎಗರಿಸಿದ ಮಹಿಳಾ ಸಿಬ್ಬಂದಿ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಡಿ.09: ಕಳೆದ ದಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಡಿ ಎಣಿಕೆ ಸಂದರ್ಭದಲ್ಲಿ ದೇಗುಲದ ಮಹಿಳಾ ನಿಬ್ಬಂದಿಯೋರ್ವರು ಹಣ ಎಗರಿಸಿ ಸಿಕ್ಕಿ ಬಿದ್ದ ಘಟನೆ ಡಿ.08 ರ ಮಂಗಳವಾರ ನಡೆದಿದೆ. ಪ್ರತಿ ಬಾರಿಯಂತೆ ಈ ಬಾರಿಯು ದೇವಸ್ಥಾನದ ಕೆಲ ಸಿಬ್ಬಂದಿ ಮತ್ತು ಕಾಲೇಜಿನ ವಿದ್ಯಾರ್ಥಿಗಳನ್ನು ದೇವರ ಕಾಣಿಕೆ ಹುಂಡಿ ಎಣಿಕೆಗೆ ನಿಯೋಜಿಸಲಾಗಿತ್ತು.

ಅದರಂತೆ ದೇವಸ್ಥಾನದ ಗೌರಮ್ಮ ಎಂಬ ಮಹಿಳಾ ಸಿಬ್ಬಂದಿ ಹಣ ಕದ್ದು ಬಚ್ಚಿಟ್ಟುಕೊಳ್ಳುವಾಗ ಮತ್ತೊಬ್ಬ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿದ್ದು, ಬಳಿಕ ಮಹಿಳಾ ಸಿಬ್ಬಂದಿಯನ್ನು ವಿಚಾರಿಸಿ ಪರಿಶೀಲನೆ ನಡೆಸಿದಾಗ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮೊತ್ತದ ಹಣ ಬಚ್ಚಿಟ್ಟಿದ್ದು ಬೆಳಕಿಗೆ ಬಂದಿದೆ. ಬಳಿಕ ಮಹಿಳೆಯನ್ನು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ದೇಶ ವಿದೇಶಗಳಿಂದ ಭಕ್ತರು ಆಗಮಿಸಿ ಹುಂಡಿ ಕಾಣಿಕೆಗಳನ್ನು ಸಮರ್ಪಿಸುತ್ತಾರೆ. ಸದ್ಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿಯ ತಯಾರಿ ನಡೆಯುತ್ತಿದೆ. ಈಗಾಗಲೇ ರಾಜ್ಯ ದೇಶ ವಿದೇಶಗಳಿಂದ ಭಕ್ತರ ದಂಡು ಆಗಮಿಸುತ್ತಲೆಯಿದೆ.

Also Read  ರಸ್ತೆ ಅಪಘಾತ ➤ ಪಾದಚಾರಿ ಸ್ಥಳದಲ್ಲೇ ಮೃತ್ಯು..!

error: Content is protected !!
Scroll to Top