ಪಡೀಲ್‌ನಲ್ಲಿ ಭೀಕರ ಅಪಘಾತ ➤ ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09: ನಗರದ ಪಡೀಲ್ ಸಮೀಪ ಓಮ್ನಿ ಇಕೋ ಕಾರು ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

 

ಚಿಕ್ಕಮಗಳೂರು ಮೂಲದ ಸುಮಂತ್ (21) ಮೃತ ಬೈಕ್ ಸವಾರ. ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪಡೀಲ್ ಸಮೀಪದಲ್ಲಿ ಓಮ್ನಿ ಇಕೋ ಕಾರಿಗೆ ಸುಮಂತ್ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸುಮಂತ್ ಗಂಭೀರವಾಗಿ ಗಾಯಗೊಂಡಿದ್ದು, ರಸ್ತೆಗೆ ಎಸೆಯಲ್ಪಟ್ಟಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದರು. ಅಪಘಾತದಲ್ಲಿ ಸಹಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Also Read  ಈ ಮಂತ್ರ ಹೇಳುವುದರಿಂದ ನಿಮಗೆ ಮಂಗಳ ದೋಷ ಒಂದೇ ದಿನದಲ್ಲಿ ನಿವಾರಣೆ ಆಗುತ್ತದೆ ಕಷ್ಟಗಳು ಪರಿಹಾರ ಆಗುತ್ತದೆ

 

error: Content is protected !!
Scroll to Top