ಮಂಗಳೂರು – ಬೆಂಗಳೂರು ಸ್ಪೆಷಲ್ ಎಕ್ಸಪ್ರೆಸ್ ರೈಲು ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.08: ಕೋರೋನಾ ಬಳಿಕ ನಿಂತುಹೋಗಿದ್ದ ಮಂಗಳೂರು ಬೆಂಗಳೂರು ನಡುವಿನ ನಡುವೆ ಸ್ಪೆಷಲ್ ಎಕ್ಸ್ ಪ್ರೆಸ್ ರೈಲು ಸೇವೆ ಮತ್ತೆ ಆರಂಭಗೊಂಡಿದೆ. ಈ ರೈಲು ವಾರದಲ್ಲಿ ನಾಲ್ಕು ದಿನಗಳ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಬೆಂಗಳೂರು ಮಂಗಳೂರು ಸೆಂಟ್ರಲ್ ಎಕ್ಸ್ ಪ್ರೆಸ್ ರೈಲು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಪ್ರತಿ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಪ್ರಯಾಣ ಬೆಳೆಸಲಿವೆ. ಈ ರೈಲು ಸೇವೆಯು ಡಿಸೆಂಬರ್ 8 ರಿಂದ 24 ರವರೆಗೆ ಸಾರ್ವಜನಿಕ ಸೇವೆಗೆ ಮುಕ್ತವಾಗಿ ಸಿಗಲಿದೆ.

 

ಇದೇ ವೇಳೆ ಕೆಎಸ್ ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹೊರಡುವ ಎಕ್ಸ್ ಪ್ರೆಸ್ ರೈಲು ರಾತ್ರಿ 10-30 ಕ್ಕೆ ಪ್ರಯಾಣ ಆರಂಭಿಸಲಿದ್ದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಿಗ್ಗೆ 8-30 ಕ್ಕೆ ತಲುಪಲಿದೆ. ಮಂಗಳೂರು ಸೆಂಟ್ರಲ್ ನಿಂದ ಬೆಂಗಳೂರಿಗೆ ಹೊರಡುವ ರೈಲು ಕೂಡ 4 ದಿನಗಳ ಕಾಲ ಸೇವೆ ನೀಡಲಿದೆ. ಮಂಗಳವಾರ, ಬುಧವಾರ, ಶುಕ್ರವಾರ, ರವಿವಾರ ಈ ರೈಲು ಓಡಲಿದೆ. ಡಿಸೆಂಬರ್ 9 ರಿಂದ 25 ರವರೆಗೆ ವಿಶೇಷ ರೈಲಿನ ಸೇವೆ ಲಭ್ಯವಾಗಲಿವೆ. ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ರಾತ್ರಿ 7 ಗಂಟೆಗೆ ಪ್ರಯಾಣ ಆರಂಭಿಸಲಿದೆ. ಕೆಎಸ್ ಆರ್ ಬೆಂಗಳೂರು ರೇಲ್ವೆ ನಿಲ್ದಾಣವನ್ನು ಬೆಳಿಗ್ಗೆ 7 ಗಂಟೆಗೆ ತಲುಪಲಿದೆ. ಸ್ಪೆಷಲ್ ಎಕ್ಸ್ ಪ್ರೆಸ್ ರೈಲು ಸೇವೆ ನೀಡುವ ರೈಲುಗಳು 1ಎಸಿ ಟು ಟಯರ್ ಕೋಚ್ 1ಎಸಿ ತ್ರಿ ಟಯರ್ ಕೋಚ್ 7ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚಸ್ 4ಜನರಲ್ ಸೆಕೆಂಡ್ ಕ್ಲಾಸ್ ಕೋಚ್ ಮತ್ತು 2ಸೆಕೆಂಡ್ ಕ್ಲಾಸ್ ಕೋಚ್ ಜತೆಗೆ ಲಗೇಜು ಬೋಗಿಯನ್ನು ಒಳಗೊಂಡಿರಲಿವೆ ಎಂದು ಭಾರತೀಯ ನೈರುತ್ಯ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Also Read  ಜೋಕಟ್ಟೆ ವಿಶೇಷ ಗ್ರಾಮ ಸಭೆ

 

error: Content is protected !!
Scroll to Top