ಕಲ್ಲುಗುಡ್ಡೆ: ತುಳುನಾಡ ತುಡರ್ ಯುವಕ ಮಂಡಲ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಡಿ.08: ಯುವಕ ಮಂಡಲಗಳು ಸಮಾಜದಲ್ಲಿ ತಪ್ಪುಗಳು ನಡೆದಾಗ, ಬೇರೆಯವರು ತಪ್ಪು ಮಾಡಿದಾಗ ಅವರನ್ನು ಸರಿ ದಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕು. ದುಶ್ಚಟ ಮುಕ್ತ ಸಮಾಜ ನಿರ್ಮಾಣವಾಗುವಲ್ಲಿ ಯುವ ಜನತೆಯ ಪಾತ್ರ ಹೆಚ್ಚಿದೆ ಎಂದು ತುಳುನಾಡ ತುಡರ್ ಯುವಕ ಮಂಡಲದ ಗೌರವ ಸಲಹೆಗಾರ ಉಮೇಶ್ ಶೆಟ್ಟಿ ಸಾಯಿರಾಮ್ ಅವರು ಹೇಳಿದರು.

ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆದ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮ ವ್ಯಾಪ್ತಿಯಲ್ಲಿ ರಚನೆಗೊಂಡ ತುಳುನಾಡ ತುಡರ್ ಯುವಕ ಮಂಡಲದ ಉದ್ಘಾಟನಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಅವರು ಮಾತನಾಡಿದರು.ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಲೆದ ವ್ಯಕ್ತಿ ಹಿಂದೆ ಹಲವರು ಬೆನ್ನ ಹಿಂದೆ ಪ್ರೋತ್ಸಾಹಿಸುತ್ತಿರುತ್ತಾರೆ. ಒಂದು ಸಂಸ್ಥೆ ಊರಿನಲ್ಲಿ ಮಾಡುವ ಒಳ್ಳೆಯ ಕೆಲಸಗಳನ್ನು ಆ ಭಾಗದ ಜನತೆ ಸದಾ ಸ್ಮರಸುತ್ತಾರೆ. ಆ ರೀತಿಯ ಕೆಲಸಗಳನ್ನು ತುಳುನಾಡ ತುಡರ್ ಯುವಕ ಮಂಡಲ ಮಾಡಲಿ ಎಂದು ಶುಭಹಾರೈಸಿದರು.

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಅರ್ಚಕ ಕೃಷ್ಣ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಉತ್ಸವ ಸಮಿತಿ ಅಧ್ಯಕ್ಷ ದುಗ್ಗಣ್ಣ ಗೌಡ ಮಾತನಾಡಿ, ಯುವಕರು ಒಟ್ಟು ಸೇರಿ ಮಾಡಿರುವ ಯುವಕ ಮಂಡಲ ಎಲ್ಲರ ಸಹಕಾರದಿಂದ ಯಶಸ್ವಿ ಪಥದತ್ತ ಸಾಗಲಿ ಎಂದು ಹಾರೈಸಿದರು. ತೆಗ್‍ರ್ ತುಳು ಕೂಟೋ ಅಧ್ಯಕ್ಷ ವಾಸುದೇವಾ ಗೌಡ ಕೇಪುಂಜ ಮಾತನಾಡಿ, ಗುರು ಹಿರಿಯರ ಮಾರ್ಗದರ್ಶನ ಪಡೆದು ನಡೆಯುವ ಸಂಘಟನೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತದೆ ಎಂದರು. ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೈವಸ್ಥಾನದ ಪರಿಚಾರಕ ವಿಜಯ ಕುಮಾರ್ ಕೇಪುಂಜ, ಯುವಕ ಮಂಡಲದ ಸಂಚಾಲಕ ಯಶೋಧರ ಪೂಜಾರಿ, ಕೇಪು ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲದ ಅಧ್ಯಕ್ಷ ಪ್ರೇಮ್‍ಚಂದ್ರ ಅಜ್ಜರಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ದಯಾನಂದ ಕಲ್ನಾರ್ ಸ್ವಾಗತಿಸಿ, ಉಪಾಧ್ಯಕ್ಷ ಪ್ರದೀಶ್ ಪಟ್ಟೆತಮಜಲು ವಂದಿಸಿದರು. ಸದಸ್ಯ ವಿಶ್ವನಾಥ ಹೇರ ಕಾರ್ಯಕ್ರಮ ನಿರೂಪಿಸಿದರು. ಭವಿತಾ ಕಲ್ಲುಗುಡ್ಡೆ ಪ್ರಾರ್ಥಿಸಿದರು.


ನೂತನ ಯುವಕ ಮಂಡಲದ ನೂತನ ಪದಗ್ರಹಣವನ್ನು ಅರ್ಚಕ ಕೃಷ್ಣ ಹೆಬ್ಬಾರ್ ನಡೆಸಿಕೊಟ್ಟರು. ಗೌರವ ಸಲಹೆಗಾರರಾಗಿ ಮೃತ್ಯುಂಜಯ ಬೀಡೆ ಕೆರೆತೋಟ, ಉಮೇಶ್ ಶೆಟ್ಟಿ ಸಾಯಿರಾಮ್, ಸಂಚಾಲಕ ಯಶೋಧರ ಪೂಜಾರಿ ಜಾಲು, ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ, ಉಪಾಧ್ಯಕ್ಷ ಪ್ರದೀಶ್, ಕಾರ್ಯದರ್ಶಿ ದಯಾನಂದ ಕಲ್ನಾರ್, ಜತೆಕಾರ್ಯದರ್ಶಿ ಉಮೇಶ್ ಕಲ್ನಾರ್, ಕೋಶಾಧಿಕಾರಿ ಮಿಥುನ್ ಕಲ್ನಾರ್ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.

error: Content is protected !!

Join the Group

Join WhatsApp Group