ವಿಕಲಚೇತನರ ರಿಯಾಯತಿ ಬಸ್ಸ್ ಪಾಸ್ ➤ ಸೇವಾ ಸಿಂಧೂ ಪೋರ್ಟಲ್‍ನಲ್ಲಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.08: 2021ನೇ ಪ್ರಸಕ್ತ ಸಾಲಿನಲ್ಲಿ ಹೊಸದಾಗಿ/ನವೀಕರಣದ ವಿಕಲಚೇತನರರಿಯಾಯತಿ ಬಸ್ಸ್‍ಪಾಸ್‍ಗಾಗಿಆನ್‍ಲೈನಲ್ಲಿ ಸರ್ಕಾರ ನಿಗದಿ ಪಡಿಸಿರುವ ಸೇವಾ ಸಿಂಧೂ ಪೋರ್ಟಲ್‍ನಲ್ಲಿಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿಯನ್ನು2021ನೇ ಜನವರಿ 01ರಿಂದಡಿಸೆಂಬರ್ 31 ರವರೆಗೆ ಸಲ್ಲಿಸಬಹುದು.ಅರ್ಜಿಯನ್ನುಆನ್‍ಲೈನಲ್ಲಿ ಸರ್ಕಾರ ನಿಗದಿ ಪಡಿಸಿರುವ ಸೇವಾ ಸಿಂಧೂ ಪೋರ್ಟಲ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಕಲಚೇತನಅರ್ಜಿದಾರರುಆನ್‍ಲೈನಲ್ಲಿತಮ್ಮ ವಿವರಗಳನ್ನು ಭರ್ತಿಗೊಳಿಸಿ ಅಗತ್ಯ ದಾಖಲೆಗಳನ್ನು ಜೆ.ಪಿ.ಜೆಅಥವಾ ಪಿ.ಡಿ.ಎಫ್ ನಮೂನೆಯಲ್ಲಿಆನ್‍ಲೈನಲ್ಲಿ ಅಡಕಗೊಳಿಸುವುದು. ಬಸ್ ಪಾಸ್ ನವೀಕರಿಸಿ ಕೊಳ್ಳುವವರು ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್‍ಗಳಲ್ಲಿ ಹಾಗೂ ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯಕಛೇರಿಯಲ್ಲಿ ಹಣ ಪಾವತಿಸಲುಅವಕಾಶವಿರುತ್ತದೆ.ಸೇವಾಸಿಂಧು ಆನ್‍ಲೈನಲ್ಲಿ ಪಾವತಿ ವ್ಯವಸ್ಥೆ ಸದ್ಯದಲ್ಲೆಜಾರಿಯಾಗಲಿದ್ದು ವಿವರಗಳನ್ನು ನಂತರ ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ //serviceonline.gov.in/karnataka/ದೂರವಾಣಿ ಸಂಖ್ಯೆ: 0824-2458173,2455999 ಅಥವಾ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಉಳ್ಳಾಲ: ಪ.ಜಾತಿ/ಪ.ಪಂಗಡ ಕುಂದುಕೊರತೆ ಸಭೆ

error: Content is protected !!
Scroll to Top